Webdunia - Bharat's app for daily news and videos

Install App

IND vs ENG T20: ಮೊಹಮ್ಮದ್ ಶಮಿಗೆ ಇಂದಾದ್ರೂ ಸಿಗುತ್ತಾ ಚಾನ್ಸ್

Krishnaveni K
ಶುಕ್ರವಾರ, 31 ಜನವರಿ 2025 (09:16 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ನಡೆಯಲಿದ್ದು ಹಿರಿಯ ವೇಗಿ ಮೊಹಮ್ಮದ್ ಶಮಿಗೆ ಇಂದಾದರೂ ಚಾನ್ಸ್ ಸಿಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಕಳೆದ ಏಕದಿನ ವಿಶ್ವಕಪ್ ಫೈನಲ್ ಆಡಿದ್ದೇ ಕೊನೆ. ಅದಾದ ಬಳಿಕ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇ ಇಲ್ಲ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾದ ಅವರು ಇದುವರೆಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ.

ಆದರೆ ಇಂದಿನ ಪಂದ್ಯದಲ್ಲಾದರೂ ಶಮಿ ಆಡಬಹುದೇನೋ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮೊದಲು ಶಮಿಗೆ ಈ ಸರಣಿಯಲ್ಲಿ ಆಡುವುದು ಅಗತ್ಯವಾಗಿದೆ.

ಇದಲ್ಲದೆ ಕಳೆದ ಪಂದ್ಯವನ್ನು ಸೋತಿದ್ದ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದೇನೋ ಎಂಬ ಭರವಸೆಯಿದೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡಾ ಫಾರ್ಮ್ ಗೆ ಮರಳುವ ಒತ್ತಡದಲ್ಲಿದ್ದಾರೆ. ಹೀಗಾಗಿ ಈ ಪಂದ್ಯದ ಆಡುವ ಬಳಗದ ಮೇಲೆ ಎಲ್ಲರ ನಿರೀಕ್ಷೆಯಿದೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ 7 ಗಂಟೆಗೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ನಿವೃತ್ತಿ ವದಂತಿಗಳಿಗೆ ಒಂದೇ ಕೆಲಸದಿಂದ ಉತ್ತರ ಕೊಟ್ಟ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments