Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಮರೆಯಲಾರದ ವಿಕೆಟ್ ಎಂದರೆ ಇದೇ ಅಂತೆ: ವಿಡಿಯೋ

Jasprit Bumrah

Krishnaveni K

ಮುಂಬೈ , ಮಂಗಳವಾರ, 28 ಜನವರಿ 2025 (10:48 IST)
ಮುಂಬೈ: ಐಸಿಸಿ ಟೆಸ್ಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿರುವ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ವೃತ್ತಿ ಜೀವನದ ಮರೆಯಲಾರದ ವಿಕೆಟ್ ಎಂದರೆ ಯಾವುದು ಎಂದು ರಿವೀಲ್ ಮಾಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ.

ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದ ಟ್ರಂಪ್ ಕಾರ್ಡ್. ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಗೆಲ್ಲಲು ಅವರು ಪ್ರಮುಖ ಕಾರಣರಾಗಿದ್ದರು. ಇತ್ತೀಚೆಗಿನ ದಿನಗಳಲ್ಲಂತೂ ಬುಮ್ರಾ ಇಲ್ಲದೇ ತಂಡವೇ ಇಲ್ಲ ಎಂಬ ಪರಿಸ್ಥಿತಿಯಾಗಿದೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದರು.

ಹೀಗಾಗಿ ಅರ್ಹವಾಗಿಯೇ ಅವರಿಗೆ ಐಸಿಸಿ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಲಭಿಸಿದೆ. ಈ ನಡುವೆ ಅವರಿಗೆ ನಿಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮರೆಯಲಾರದ ವಿಕೆಟ್ ಯಾವುದು ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಅವರು ಇಂಗ್ಲೆಂಡ್ ನ ಒಲಿ ಪಾಪ್ ವಿಕೆಟ್ ಎಂದಿದ್ದಾರೆ.

ಆ ಎಸೆತವನ್ನು ಯಾವುದೇ ಪರಿಣಿತ ಬ್ಯಾಟಿಗನೂ ಎದುರಿಸುವುದು ಕಷ್ಟವೇ ಎನಿಸುತ್ತದೆ. ಕಾಲಿನ ಬುಡಕ್ಕೆ ಬಂದು ಬೀಳುವ ಚೆಂಡು ಬಳಿಕ ತಿರುವು ಪಡೆದು ಮಿಡಲ್ ಮತ್ತು ಲೆಗ್ ಸ್ಟಂಪ್ ಎಗರಿಸುತ್ತದೆ. ಈ ವಿಕೆಟ್ ನ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ICC Women's ODI Cricket: ಕ್ರಿಕೆಟ್‌ನಲ್ಲಿ ಹೃದಯ ಗೆದ್ದ ಚೆಲುವೆ ಸ್ಮೃತಿ ಮಂಧಾನೆಗೆ ವರ್ಷದ ಗೌರವ