Webdunia - Bharat's app for daily news and videos

Install App

IND vs ENG:ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲಲು ಇದೇ ಕಾರಣ

Krishnaveni K
ಬುಧವಾರ, 25 ಜೂನ್ 2025 (09:19 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಆಘಾತಕಾರಿಯಾಗಿ ಸೋತಿದೆ. ಗೆಲ್ಲಲು ಎಲ್ಲಾ ಅವಕಾಶವಿದ್ದೂ ಟೀಂ ಇಂಡಿಯಾ ಸೋಲಲು ಕಾರಣವೇನು ಇಲ್ಲಿದೆ ನೋಡಿ ವಿವರ.

ಮೊದಲ ಇನಿಂಗ್ಸ್ ನಲ್ಲಿ 471 ರನ್ ಗಳಿಸಿದ್ದ ಟೀಂ ಇಂಡಿಯಾ ಎರಡನೇ ಇನಿಂಗ್ಸ್ ನಲ್ಲಿ 364 ರನ್ ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 465 ರನ್ ಗಳಿಸಿದರೆ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿ ಗೆದ್ದುಕೊಂಡಿದೆ.

ಕಾರಣ ನಂ.1
ಟೀಂ ಇಂಡಿಯಾ ಸೋಲಿಗೆ ಮೊದಲ ಕಾರಣ ಕೆಳ ಕ್ರಮಾಂಕದ ವೈಫಲ್ಯ.  ಎರಡೂ ಇನಿಂಗ್ಸ್ ಗಳಲ್ಲಿ ಉತ್ತಮ ಆರಂಭ ಪಡೆದರೂ ಅದನ್ನು ಬಳಸಿಕೊಳ್ಳುವಲ್ಲಿ ಕೆಳ ಕ್ರಮಾಂಕದ ಬ್ಯಾಟಿಗರು ವಿಫಲರಾದರು. ಮೊದಲ ಇನಿಂಗ್ಸ್ ನಲ್ಲಿ 430 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಟೀಂ ಇಂಡಿಯಾ ಬಳಿಕ ನಲವತ್ತೇ ರನ್ ಗಳ ಅಂತರದಲ್ಲಿ ಉಳಿದ 6 ವಿಕೆಟ್ ಗಳನ್ನು ಕಳೆದುಕೊಂಡಿತು. ಈ ಪೈಕಿ ಇಬ್ಬರು ಶೂನ್ಯ ಸುತ್ತಿದ್ದರೆ ಉಳಿದ ಮೂವರದ್ದು ಏಕಂಕಿ ಸ್ಕೋರ್. ಎರಡನೇ ಇನಿಂಗ್ಸ್ ನಲ್ಲೂ ಇದೇ ಕತೆ. ಒಂದು ಹಂತದಲ್ಲಿ 333 ರನ್ ಗಳಿಗೆ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಮತ್ತೆ 30 ರನ್ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು. ಈ ಪೈಕಿ ಮೂವರು ಶೂನ್ಯ ಸಾಧಕರು. ಇದರಿಂದಾಗಿ ಈ ಪಂದ್ಯದಲ್ಲಿ ಭಾರತದಿಂದ ಐದು ಶತಕ ದಾಖಲಾಗಿಯೂ ತಂಡ ಸೋಲಬೇಕಾಯಿತು.

ಕಾರಣ ನಂ2
ಕ್ಯಾಚ್ ಬಿಟ್ಟರೆ ಮ್ಯಾಚ್ ಸೋತಂತೆ ಎನ್ನುತ್ತಾರೆ. ಅದು ಈ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಷ್ಟವಾಗಿ ಅನುಭವಿಸಿತು. ಕ್ಯಾಚ್ ಬಿಟ್ಟ ಹೆಚ್ಚಿನ ಶ್ರೇಯಸ್ಸು ಯಶಸ್ವಿ ಜೈಸ್ವಾಲ್ ಗೆ ಹೋಗಬೇಕು. ಅವರು ಒಟ್ಟು 5 ಕ್ಯಾಚ್ ಬಿಟ್ಟು ವಿಲನ್ ಆದರು. ಅದರಲ್ಲೂ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಬೆನ್ ಡಕೆಟ್ ಕ್ಯಾಚ್ ಕೈಚೆಲ್ಲಿದ್ದು ದೊಡ್ಡ ಪ್ರಮಾದವಾಯಿತು. ಮೊದಲ ಇನಿಂಗ್ಸ್ ನಲ್ಲಿ ಬುಮ್ರಾ ಒಬ್ಬರ ಬೌಲಿಂಗ್ ನಲ್ಲೇ ಮೂರು ಕ್ಯಾಚ್ ನೆಲಕ್ಕೆ ಹಾಕಲಾಗಿತ್ತು.

ಈ ಎರಡು ಹುಳುಕುಗಳನ್ನು ಸರಿಪಡಿಸದೇ ಇದ್ದರೆ ಟೀಂ ಇಂಡಿಯಾ ಮುಂದೆ ಗೆಲ್ಲುವುದು ಕಷ್ಟವಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕ್ಯಾಚ್‌ಗಳನ್ನು ಬಿಟ್ಟು ಕೆಟ್ಟ ಗಿಲ್ ಪಡೆ, ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಗೆಲುವು

ENG vs IND: ಟೆಸ್ಟ್‌ ಆರಂಭಕ್ಕೂ ಮುನ್ನಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ

ದಯವಿಟ್ಟು ಎಲ್ಲ ಟೆಸ್ಟ್‌ಗಳನ್ನು ಆಡಿ: ಬೂಮ್ರಾಗೆ ಪತ್ನಿಯಲ್ಲೇ ಸಂದೇಶ ಕಳುಹಿಸಿದ ಗವಾಸ್ಕಾರ್‌, ಪೂಜಾರ

ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

ಮುಂದಿನ ಸುದ್ದಿ
Show comments