Publish Date: Wed, 25 Jun 2025 (08:49 IST)
Updated Date: Wed, 25 Jun 2025 (08:56 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಪರಸ್ಪರ ಕನ್ನಡದಲ್ಲಿ ಮಾತನಾಡುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದೆ. ಗೆಲ್ಲಬೇಕಾಗಿದ್ದ ಪಂದ್ಯವನ್ನು ಕೊನೆಯ ದಿನದ ತಪ್ಪುಗಳಿಂದ ಟೀಂ ಇಂಡಿಯಾ ಸೋಲಬೇಕಾಯಿತು. ಈ ಪಂದ್ಯದಲ್ಲಿ ಮೂವರು ಕನ್ನಡಿಗರು ತಂಡದಲ್ಲಿದ್ದಿದ್ದು ವಿಶೇಷವಾಗಿತ್ತು. ಪ್ರಸಿದ್ಧ ಕೃಷ್ಣ, ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ತಂಡದಲ್ಲಿದ್ದರು.
ನಿನ್ನೆ ಪಂದ್ಯದ ಅಂತಿಮ ದಿನ ಪ್ರಸಿದ್ಧ ಕೃಷ್ಣ ಬೌಲಿಂಗ್ ಮಾಡುವಾಗ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಕನ್ನಡದಲ್ಲೇ ಅವರಿಗೆ ಸಲಹೆ ಸೂಚನೆ ನೀಡಿದ್ದರು. ಇವರಿಬ್ಬರ ಕನ್ನಡ ಸಂಭಾಷಣೆಯ ತುಣುಕು ಈಗ ವೈರಲ್ ಆಗಿದೆ.
ಬೌಲಿಂಗ್ ಗೆ ಸಿದ್ಧರಾಗಿದ್ದ ಪ್ರಸಿದ್ಧರನ್ನು ಕರೆಯುವ ರಾಹುಲ್ ಮಗಾ.. ಪ್ರಸಿದ್ಧ್.. ಚೆನ್ನಾಗಿ ಹೋಗ್ತಿದೆ ಮಗಾ.. ಹೀಗೇ ಇರ್ಲಿ ಎಂದು ಸಲಹೆ ನೀಡುತ್ತಾರೆ. ಇದಕ್ಕೆ ಪ್ರಸಿದ್ಧ ಕೂಡಾ ಕನ್ನಡದಲ್ಲೇ ಉತ್ತರಿಸುತ್ತಾರೆ. ಇಬ್ಬರ ಸಂಭಾಷಣೆಯ ತುಣುಕು ಇಲ್ಲಿದೆ ನೋಡಿ.