Publish Date: Thu, 05 Mar 2026 (22:44 IST)
Updated Date: Thu, 05 Mar 2026 (23:00 IST)
2026ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಟೀಂ ಇಂಡಿಯಾ ಸಂಜು ಸಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಹಾಗೂ ಈಶಾನ್ ಕಿಶಾನ್ ಅದ್ಭುತ ಪ್ರದರ್ಶನದಿಂದ ಭಾರತ 20 ಓವರ್‌ಗಳಲ್ಲಿ 7ವಿಕೆಟ್ ಕಳೆದುಕೊಂಡು 253ರನ್ ಗಳಿಸಿತು.
ಅಭಿಷೇಕ್ ಶರ್ಮಾ 7ಎಸೆತಕ್ಕೆ 9ರನ್, ಸಂಜು ಸಮ್ಸನ್ 42 ಎಸೆತಕ್ಕೆ 89ರನ್, ಈಶಾನ್ ಕಿಶಾನ್ 18 ಎಸೆತಕ್ಕೆ 39ರನ್, ಶಿವಂ ದುಬೆ 25 ಎಸೆತಕ್ಕೆ 43 ರನ್, ಸೂರ್ಯಕುಮಾರ್ ಯಾದವ್ 6 ಎಸೆತಕ್ಕೆ 11ರನ್, ಹಾರ್ದಿಕ್ ಪಾಂಡ್ಯ 12 ಎಸೆತಕ್ಕೆ 27ರನ್, ಅಕ್ಸರ್ ಪಟೇಲ್ 2 ಎಸೆತಕ್ಕೆ 2ರನ್ ಗಳಿಸಿ, ಇಂಗ್ಲೆಂಡ್‌ಗೆ 253ರನ್‌ಗಳ ದೊಡ್ಡ ಗೆಲುವಿನ ಟಾರ್ಗೆಟ್ ನೀಡಿತು.
ಭಾರೀ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡು ಆರಂಭಿತ ಆಘಾತ ಅನುಭವಿಸಿತು.
ಬೆಥೆಲ್ ಅವರ ಸೆಂಚುರಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಹತ್ತಿರ ತಂದಿತು. ಆದರೆ ಭಾರತ ವಿರುದ್ಧ 7ರನ್‌ಗಳಿಂದ ಸೋಲು ಅನುಭವಿಸಿತು.
ಈ ಪಂದ್ಯದಲ್ಲಿ ಗೆದ್ದ ಭಾರತ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.