IND vs ENG: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಲಾಯಕ್ಕೇ ಅಲ್ಲ

Krishnaveni K
ಬುಧವಾರ, 25 ಜೂನ್ 2025 (11:36 IST)
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 5 ಶತಕಗಳು ದಾಖಲಾದ ಹೊರತಾಗಿಯೂ ಟೀಂ ಇಂಡಿಯಾ ಸೋತು ಬೇಡದ ದಾಖಲೆ ಮೈಮೇಲೆಳೆದುಕೊಂಡಿದೆ. ಇದಾದ  ಬಳಿಕ ಗೌತಮ್ ಗಂಭೀರ್ ಟೆಸ್ಟ್ ತಂಡದ ಕೋಚ್ ಆಗಲು ಲಾಯಕ್ಕಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ನಾಲ್ಕೂ ದಿನ ಟೀಂ ಇಂಡಿಯಾ ಎದುರಾಳಿಯ ಮೇಲೆ  ಪ್ರಾಬಲ್ಯ ಮೆರೆದಿತ್ತು. ಅದರಲ್ಲೂ ಎರಡು ಇನಿಂಗ್ಸ್ ಸೇರಿ ಐದು ಶತಕ ದಾಖಲಾಗಿತ್ತು. ಅಲ್ಲದೆ ಬುಮ್ರಾಗೂ 5 ವಿಕೆಟ್ ಸಿಕ್ಕಿತ್ತು. ಇಷ್ಟೆಲ್ಲಾ ಆದ ಮೇಲೂ ಕೊನೆಗೆ ಪಂದ್ಯ ಗೆದ್ದಿದ್ದು ಮಾತ್ರ ಇಂಗ್ಲೆಂಡ್.

ಇದರೊಂದಿಗೆ ಐದು ಶತಕಗಳು ವ್ಯರ್ಥವಾಗಿತ್ತು. ಜೊತೆಗೆ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಗೌತಮ್ ಗಂಭೀರ್ ಸೂಕ್ತ ಕೋಚ್ ಅಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಕಿರು ಮಾದರಿಗೆ ಗಂಭೀರ್ ಓಕೆ ಆದರೆ ಸುದೀರ್ಘ ಮಾದರಿಗೆ ಟೀಂ ಇಂಡಿಯಾ ಬೇರೊಬ್ಬ ಕೋಚ್ ನೇಮಿಸಬೇಕು ಎನ್ನುತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ಮೇಲೆ ಟೀಂ ಇಂಡಿಯಾ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಗೆದ್ದಿದ್ದು ಕೇವಲ 3 ಟೆಸ್ಟ್ ಮಾತ್ರ. 7 ಪಂದ್ಯಗಳನ್ನು ಸೋತಿದ್ದರೆ ಕೇವಲ 1 ರಲ್ಲಿ ಮಾತ್ರ ಡ್ರಾ ಮಾಡಿಕೊಂಡಿದೆ. ಟೆಸ್ಟ್ ಮಾದರಿಯಲ್ಲಿ ಭಾರತ ಇಷ್ಟೊಂದು ಕಳಪೆ ಸಾಧನೆ ಮಾಡಿದ್ದು ಇತ್ತೀಚೆಗಿನ ವರ್ಷಗಳಲ್ಲೇ ಇಲ್ಲ. ಇದರಿಂದಾಗಿ ಗಂಭೀರ್ ರನ್ನೇ ಕಿತ್ತೊಗೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್‌ ಮಿನಿ ಹರಾಜಿಗೆ ಕ್ಷಣಗಣನೆ: ಯಾರಿಗೆ ಒಲಿಯಲಿದೆ ಜಾಕ್‌ಪಾಟ್‌, ನೇರಪ್ರಸಾರದ ಮಾಹಿತಿ ಇಲ್ಲಿದೆ

ಜಸ್ಪ್ರೀತ್ ಬುಮ್ರಾ ದಿಡೀರ್ ಮನೆಗೆ ಮರಳಿದ್ದೇಕೆ, ಕಾರಣ ಬಯಲು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮುಂದಿನ ಸುದ್ದಿ
Show comments