Select Your Language

Notifications

webdunia
webdunia
webdunia
webdunia

IND vs BAN: ಮತ್ತೇ ಅಬ್ಬರಿಸಿದ ಅಭಿಷೇಕ್‌ ಶರ್ಮಾ, ಬಾಂಗ್ಲಾರಿಗೆ ಸವಾಲಿನ ಗುರಿ

ಭಾರತ ಮತ್ತು ಬಾಂಗ್ಲಾದೇಶ ಲೈವ್ ಪಂದ್ಯ

Sampriya

ದುಬೈ , ಬುಧವಾರ, 24 ಸೆಪ್ಟಂಬರ್ 2025 (22:20 IST)
Photo Credit X
ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 169 ರನ್‌ಗಳ ಸವಾಲಿನ ಗುರಿ ನೀಡಿದೆ. 

ಟಾಸ್‌ ಗೆದ್ದ ಬಾಂಗ್ಲಾದೇಶ, ಫೀಲ್ಡಿಂಗ್ ಆಯ್ದು, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಅಭಿಷೇಕ್‌ ಶರ್ಮಾ ಅವರ ಅರ್ಧ ಶತಕದ ನೆರವಿನಿಂದ  20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. 

ಆರಂಭಿಕ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ(75 ರನ್, 37 ಎಸೆತ), ಶುಭ್ಮನ್ ಗಿಲ್( 29 ರನ್‌, 19 ಎಸೆತ) ಅವರಿಬ್ಬರು ಮೊದಲ ವಿಕೆಟ್‌ ಜತೆಯಾಟದಲ್ಲಿ 6 ಪಾಯಿಂಟ್ 2 ಓವರ್‌ಗೆ 77ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದ್ದರು. 

ಆದರೆ ಗಿಲ್ ಔಟ್ ಆದ ಬಳಿಕ ಬಂದ ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರು ನಿರಾಸೆ ಮೂಡಿಸಿದರು. 

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(38 ರನ್, 29ಎಸೆತ) ಭಾರತ ತಂಡವು ಸವಾಲಿನ ಮೊತ್ತ ಗಳಿಸುವಲ್ಲಿ ನೆರವಾದರು. ಬಾಂಗ್ಲಾ ಪರ ರಶೀದ್ ಹುಸೇನ್ 2 ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯವನ್ನು ಗೆದ್ದ ತಂಡವು ಫೈನಾಲ್‌ಗೆ ಅರ್ಹತೆ ಪಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Asia Cup 2025: ಅಜೇಯ ಭಾರತದ ಓಟಕ್ಕೆ ಟಾಸ್‌ ಗೆದ್ದ ಬಾಂಗ್ಲಾ ತಂಡ ಬ್ರೇಕ್ ಹಾಕುತ್ತಾ