IND vs AUS Test: ರೋಹಿತ್ ಶರ್ಮಾ ಅಲ್ಲೇ ಇರ್ಲಿ, ನಮ್ಗೆ ಜಸ್ಪ್ತೀತ್ ಬುಮ್ರಾನೇ ಸಾಕು

Krishnaveni K
ಸೋಮವಾರ, 25 ನವೆಂಬರ್ 2024 (09:04 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರದರ್ಶನದಿಂದ ಇಂಪ್ರೆಸ್ ಆಗಿರುವ ಫ್ಯಾನ್ಸ್ ಕ್ಯಾಪ್ಟನ್ ಆಗಿ ಬುಮ್ರಾನೇ ಮುಂದುವರಿಯಲಿ ಎನ್ನುತ್ತಿದ್ದಾರೆ.

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಕೌಟುಂಬಿಕ ಕಾರಣಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಅವರ ಬದಲಿಗೆ ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡ ಕೇವಲ 150 ರನ್ ಗಳಿಗೆ ಆಲೌಟ್ ಆದಾಗ ಎಲ್ಲರೂ ಹಿಡಿಶಾಪ ಹಾಕಿದ್ದರು.

ಆದರೆ ಕಡಿಮೆ ಮೊತ್ತಕ್ಕೆ ಆಲೌಟ್ ಆದರೂ ಭಾರತ ತಂಡ ಎದುರಾಳಿಗೆ ಬೌಲಿಂಗ್ ನಲ್ಲಿ ತಿರುಗೇಟು ನೀಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಬುಮ್ರಾ ನಾಯಕನಾಗಿ ಮಾತ್ರವಲ್ಲ, ಬೌಲರ್ ಆಗಿಯೂ ಮುಂಚೂಣಿಯಲ್ಲಿ ನಿಂತು ತಂಡ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವ ಮತ್ತು ಆಟದ ಶೈಲಿಗೆ ಅಭಿಮಾನಿಗಳು ಮನಸೋತಿದ್ದಾರೆ.
 
ಹೀಗಾಗಿ ಮುಂದಿನ ಪಂದ್ಯಗಳಿಗೂ ರೋಹಿತ್ ಬಾರದೇ ಇದ್ದರೂ ನಮಗೆ ಚಿಂತೆಯಿಲ್ಲ. ನಾಯಕರಾಗಿ ಬುಮ್ರಾನೇ ಮುಂದುವರಿಯಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆಲುವಿನ ಹಾದಿಯಲ್ಲಿದೆ. ವಿಶೇಷವಾಗಿ ಈ ಪಂದ್ಯದಲ್ಲಿ ಭಾರತ ತಿರುಗಿ ಬಿದ್ದಿರುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ರಾಹುಲ್‌ಗೆ ಒಲಿದ ನಾಯಕತ್ವ

IND vs SA 2nd Test: ಹರಿಣ ಪಡೆಯ ಬಾಲಂಗೋಚಿಗಳ ಆಟಕ್ಕೆ ಸುಸ್ತಾದ ಭಾರತದ ಬೌಲರ್‌ಗಳು

ಸ್ಮೃತಿ ಮಂಧಾನ ಮದುವೆ ದಿಡೀರ್ ಮುಂದೂಡಿಕೆ: ಕಾರಣ ಶಾಕಿಂಗ್

Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

ಪಲಾಶ್‌ ಜೊತೆ ಸ್ಮೃತಿ ಮಂದಾನ ಹೊಸ ಇನಿಂಗ್ಸ್‌: ಕುಣಿದು ಕುಪ್ಪಳಿಸಿದ ಕ್ಯೂಟ್‌ ಜೊಡಿ

ಮುಂದಿನ ಸುದ್ದಿ
Show comments