ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬ್ಯಾಟಿಗ ಲಬುಶೇನ್ ಗೆ ಸಲ್ಲದ ಜಾಗಕ್ಕೆ ಬಾಲ್ ಬಿದ್ದು ಅನರ್ಥವಾಗಿದೆ. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಹೀಗಾಗಿದ್ದು ವಿಡಿಯೋ ವೈರಲ್ ಆಗಿದೆ.
ಒಟ್ಟು 145 ಎಸೆತ ಎದುರಿಸಿ ಲಬುಶೇನ್ 72ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಔಟಾದರು. ಇದಕ್ಕೆ ಮೊದಲು ಅವರು ಆಸ್ಟ್ರೇಲಿಯಾಗೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ಯಶಸ್ವಿಯಾದರು. ಅದರಲ್ಲೂ ಸಿರಾಜ್ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸುತ್ತಿದ್ದರು.
ಆದರೆ ಒಂದು ಹಂತದಲ್ಲಿ ಸಿರಾಜ್ ವೇಗದ ಬೌಲಿಂಗ್ ನ್ನು ಡಿಫೆನ್ಸ್ ಮಾಡುವಾಗ ತಡಬಡಾಯಿಸಿದರು. ಅದರಲ್ಲೂ ಒಮ್ಮೆ ಅವರ ತೊಡೆಗೆ ಚೆಂಡು ಬಡಿದರೆ ಮತ್ತೊಮ್ಮೆ ತೊಡೆಯ ಮಧ್ಯಭಾಗಕ್ಕೇ ಚೆಂಡು ಬಡಿದಿದೆ. ಇದರಿಂದ ನೋವಿಗೊಳಗಾದ ಅವರು ಕ್ರೀಸ್ ನಲ್ಲೇ ಕುಸಿದು ಕುಳಿತರು.
ಆ ಬಳಿಕ ಅವತ್ತ ಖಾಸಗಿ ಭಾಗದಲ್ಲಿ ರಕ್ತ ಸೋರುತ್ತಿದ್ದುದು ಕಂಡುಬಂತು. ತೀವ್ರ ನೋವಿಗೊಳಗಾದ ಲಬುಶೇನ್ ಗೆ ಬಳಿಕ ಫಿಸಿಯೋ ಚಿಕಿತ್ಸೆ ನೀಡಿದರು. ಇತ್ತ ಲಬುಶೇನ್ ಅವಸ್ಥೆ ನೋಡಿ ಟೀಂ ಇಂಡಿಯಾ ಆಟಗಾರರು ನಗಬೇಕೋ, ಅಳಬೇಕೋ ಎಂದು ತಿಳಿಯದೇ ಸುಮ್ಮನೇ ನಿಂತಿದ್ದರು.