Webdunia - Bharat's app for daily news and videos

Install App

IND vs AUS: 2023 ರಿಂದ ಹೊತ್ತಿದ್ದ ಸ್ವಾರ್ಥಿ ಪಟ್ಟವನ್ನು ಕೊನೆಗೂ ಕಿತ್ತು ಬಿಸಾಕಿದ ಕನ್ನಡಿಗ ಕೆಎಲ್ ರಾಹುಲ್

Krishnaveni K
ಬುಧವಾರ, 5 ಮಾರ್ಚ್ 2025 (09:19 IST)
Photo Credit: X
ದುಬೈ: 2023 ರಿಂದ ಕೆಎಲ್ ರಾಹುಲ್ ಹೊತ್ತಿದ್ದ ಸ್ವಾರ್ಥಿ ಎಂಬ ಪಟ್ಟವನ್ನು ಇಂದು ಕಿತ್ತು ಬಿಸಾಕಿದರು. ಅಂದು ತಮ್ಮದಲ್ಲದ ತಪ್ಪಿಗೆ ಹೊಣೆ ಮಾಡಿದ್ದವರಿಗೆ ಇಂದು ಮತ್ತೊಂದು ಇನಿಂಗ್ಸ್ ಮೂಲಕ ತಕ್ಕ ಉತ್ತರ ಕೊಟ್ಟರು.

ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಕೆಎಲ್ ರಾಹುಲ್ ನಿಧಾನಗತಿಯ ಇನಿಂಗ್ಸ್ ಆಡಿದ್ದನ್ನೇ ಇದುವರೆಗೂ ಅವರ ಟೀಕಾಕಾರರು ಪದೇ ಪದೇ ಉಲ್ಲೇಖಿಸಿ ಅವರನ್ನು ಸ್ವಾರ್ಥಿ ಎನ್ನುತ್ತಲೇ ಇದ್ದರು. ಅಷ್ಟಕ್ಕೂ ಅಂದು ಅವರು ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ಅಂತಹದ್ದೊಂದು ಇನಿಂಗ್ಸ್ ಆಡಲೇಬೇಕಿತ್ತು. ಆದರೆ ಅವರದಲ್ಲದ ತಪ್ಪಿಗೆ ಅವರನ್ನು ಹೊಣೆ ಮಾಡಲಾಯಿತು. ಭಾರತ ಕಳಪೆ ಮೊತ್ತ ಗಳಿಸಿದ್ದಕ್ಕೆ ಅವರನ್ನೇ ಹೊಣೆ ಮಾಡಲಾಯಿತು.

ಈ ಚಾಂಪಿಯನ್ಸ್ ಟ್ರೋಫಿಯಲ್ಲೂ ನಿನ್ನೆಯವರೆಗೂ ರಾಹುಲ್ ಯಾಕೆ, ರಿಷಭ್ ಪಂತ್ ರನ್ನು ಆಯ್ಕೆ ಮಾಡಬೇಕಿತ್ತು, ರಾಹುಲ್ ಸ್ವಾರ್ಥಿ, ನಿಷ್ಪ್ರಯೋಜಕ ಎಂದು ಜರಿಯುತ್ತಲೇ ಇದ್ದರು. ಆದರೆ ನಿನ್ನೆಯ ಒಂದು ಇನಿಂಗ್ಸ್ ನಿಂದ ಕೆಎಲ್ ರಾಹುಲ್ ತಾವು ಏನೆಂದು ವಿಶ್ವಕ್ಕೇ ತೋರಿಸಿಕೊಟ್ಟರು.

ಈ ಟೂರ್ನಮೆಂಟ್ ಆರಂಭವಾದಾಗ ವಿಕೆಟ್ ಕೀಪರ್, ಬ್ಯಾಟಿಗನಾಗಬೇಕಿತ್ತು. ಆ ಜವಾಬ್ಧಾರಿ ನಿಭಾಯಿಸಿದರು. ತಂಡಕ್ಕೆ ಅಗತ್ಯ ಬಂದಾಗ ಕೆಳ ಕ್ರಮಾಂಕದಲ್ಲಿ ಇಲ್ಲದಿದ್ದಾಗ ಮೇಲಿನ ಕ್ರಮಾಂಕದಲ್ಲಿ ಆಡಬೇಕಿತ್ತು. ಅದನ್ನೂ ಮಾಡಿದರು. ನಿನ್ನೆಯ ಪಂದ್ಯದಲ್ಲಿ ಕ್ರೀಸ್ ಗೆ ಬಂದಾಗ ರಾಹುಲ್ ಸಾರಥಿಯ ಪಾತ್ರ ಮಾಡಬೇಕಿತ್ತು. ಅದನ್ನು ಮಾಡಿದರು. ಕೊನೆಯಲ್ಲಿ ಪಂದ್ಯ ಗೆಲ್ಲಿಸುವ ಹೊಣೆ ಹೊರಬೇಕಿತ್ತು. ಅದನ್ನೂ ಯಶಸ್ವಿಯಾಗಿ ನಿಭಾಯಿಸಿದರು. ಹೀಗಾಗಿಯೇ ಕೊನೆಯಲ್ಲಿ ಗೆದ್ದಾಗ ಅವರು ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಸಾಮಾನ್ಯವಾಗಿ ರಾಹುಲ್ ರಿಂದ ಈ ವರ್ತನೆ ಅಪರೂಪ. ಆದರೆ ನಿನ್ನೆ ಪಂದ್ಯ ಗೆಲ್ಲಿಸಿದ ಮೇಲೆ ಅವರಿಗೆ ಕಳೆದ ಏಕದಿನ ವಿಶ್ವಕಪ್ ಫೈನಲ್ ಇನಿಂಗ್ಸ್ ನಿಂದ ಇದುವರೆಗೂ ತಮ್ಮನ್ನು ಟೀಕಿಸುತ್ತಿದ್ದವರ ಮಾತು ನೆನಪಾಗಿರಬೇಕು. ಅದೇನೇ ಇರಲಿ, ನಮ್ಮ ಕನ್ನಡಿಗ ರಾಹುಲ್ ಅದು ಕೆಎಲ್ ಆಗಿರಲಿ, ದ್ರಾವಿಡ್ ಆಗಿರಲಿ, ರಾಹುಲ್ ಎಂಬ ಕನ್ನಡಿಗ ಯಾವತ್ತೂ ತಂಡಕ್ಕಾಗಿ ಆಡುವವರು ಎಂಬ ಹರ್ಷ ಭೋಗ್ಲೆ ಮಾತು ಸತ್ಯವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

BCCI Annual Contract: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಯಾವ ಆಟಗಾರರಿಗೆ ಯಾವ ಶ್ರೇಣಿ, ವೇತನವೆಷ್ಟು ಇಲ್ಲಿದೆ ವಿವರ

Virat Kohli: ಶ್ರೇಯಸ್ ಅಯ್ಯರ್ ಎದುರು ಸಂಭ್ರಮಾಚರಿಸಿ ತಾವೇ ಇಕ್ಕಟ್ಟಿಗೆ ಸಿಲುಕಿದ ವಿರಾಟ್ ಕೊಹ್ಲಿ: ನಿಮ್ಗಿದು ಬೇಕಿತ್ತಾ

Rohit Sharma: ಏಯ್ ನಾನು ಔಟಲ್ಲ ಕಣೋ ನಾಟೌಟ್: ಮೈದಾನದಲ್ಲೇ ಜಡೇಜಾಗೆ ಗದರಿದ ರೋಹಿತ್ ಶರ್ಮಾ

IPL 2025 RCB vs PBKS: ನಿಮ್ಮ ಮೈದಾನದಲ್ಲೇ ಗೆದ್ದಿದ್ದೇವೆ ನೋಡ್ಕೋ ಎಂದ ಕೊಹ್ಲಿ, ಶ್ರೇಯಸ್ ಅಯ್ಯರ್ ಗಪ್ ಚುಪ್ Video

RCB vs PBKS Match:ಪಂಜಾಬ್‌ ತವರಿನಲ್ಲೇ ರೀವೆಂಜ್‌ ತೀರಿಸಿಕೊಂಡ ಆರ್‌ಸಿಬಿ

ಮುಂದಿನ ಸುದ್ದಿ
Show comments