IND vs AUS: ಇತಿಹಾಸ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ

Krishnaveni K
ಭಾನುವಾರ, 15 ಡಿಸೆಂಬರ್ 2024 (14:21 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ವೇಗಿ ಜಸ್ಪ್ರೀತ್ ಬುಮ್ರಾ ದಾಖಲೆಯೊಮದನ್ನು ಮಾಡಿದ್ದಾರೆ.
 

ಈ ಪಂದ್ಯದಲ್ಲಿ ಮತ್ತೊಮ್ಮೆ ಬುಮ್ರಾ 5 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ವಿದೇಶೀ ನೆಲದಲ್ಲಿ ಅತ್ಯಧಿಕ ವಿಕೆಟ್ ಗಳಿಸಿದ ಭಾರತೀಯ ವೇಗಿ ಎಂಬ ದಾಖಲೆ ಮಾಡಿದ್ದಾರೆ. ಟೀಂ ಇಂಡಿಯಾ ಪರ ಅತ್ಯಧಿಕ 5 ವಿಕೆಟ್ ಕಬಳಿಸಿದ್ದ ಕಪಿಲ್ ದೇವ್ ದಾಖಲೆಯನ್ನು ಮುರಿದರು. ಉಸ್ಮಾನ್ ಖವಾಜ, ಮೆಕ್ ಸ್ವೀನಿ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಅವರ ಪ್ರಮುಖ ವಿಕೆಟ್ ಗಳನ್ನು ಬುಮ್ರಾ ಕಬಳಿಸಿದರು.

ಇಂದು ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ಈ ಪೈಕಿ ಟ್ರಾವಿಸ್ ಹೆಡ್ 152 ರನ್ ಗಳಿಸಿದರೆ ಸ್ಮಿತ್ 101 ರನ್ ಗಳಿಸಿದರು. ದಿನದಂತ್ಯಕ್ಕೆ ಅಲೆಕ್ಸ್ ಕ್ಯಾರಿ 45, ಮಿಚೆಲ್ ಸ್ಟಾರ್ಕ್ 7 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತದ ಪರ ಬುಮ್ರಾ 5 ವಿಕೆಟ್ ಕಬಳಿಸಿದರೆ, ನಿತೀಶ್ ಕುಮಾರ್, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

3rd T20: ಏಕದಿನ ಸರಣಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ

WPL 2026: ಆರ್‌ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್‌

ಭಾರತದಲ್ಲಿ ವಿಶ್ವಕಪ್‌ ಆಡಲ್ಲ ಎಂದು ತಗಾದೆ ಎತ್ತಿದ್ದ ಬಾಂಗ್ಲಾದೇಶಕ್ಕೆ ಐಸಿಸಿ ಶಾಕ್‌

IPL 2026: ಅಭ್ಯಾಸಕ್ಕೆ ಮರಳಿದ ಎಂಎಸ್‌ ಧೋನಿ

ಪಲಾಶ್ ಮುಚ್ಚಲ್‌ಗಿಂತ ಮತ್ತೊಂದು ಸಂಬಂಧ, ನಿರ್ಮಾಪಕ ಬಿಚ್ಚಿಟ್ಟ ಸತ್ಯವೇನು

ಮುಂದಿನ ಸುದ್ದಿ
Show comments