ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮೈದಾನ ಫಿಕ್ಸ್

Webdunia
ಗುರುವಾರ, 11 ಮಾರ್ಚ್ 2021 (09:40 IST)
ದುಬೈ: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯುವ ಮೈದಾನವನ್ನು ಕೊನೆಗೂ ಐಸಿಸಿ ಅಂತಿಮಗೊಳಿಸಿದೆ. ಸೌಥಾಂಪ್ಟನ್ ನಲ್ಲಿ ಅಂತಿಮ ಪಂದ್ಯ ನಡೆಯಲಿರುವುದಾಗಿ ಘೋಷಿಸಿದೆ.


ಜುಲೈನಲ್ಲಿ ನಡೆಯಲಿರುವ ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಕೊರೋನಾ ಬಳಿಕ ಮೊದಲ ಬಾರಿಗೆ ಜೈವ ಸುರಕ್ಷಾ ವಲಯದಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಹೀಗಾಗಿ ಇದುವೇ ಸುರಕ್ಷಿತ ತಾಣ ಎಂಬ ನಿರ್ಧಾರಕ್ಕೆ ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತೀರ್ಮಾನಕ್ಕೆ ಬಂದಿದೆ.

ಈ ಮೊದಲು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ತೀರ್ಮಾನವಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಮೊನ್ನೆಯಷ್ಟೇ ಐಸಿಸಿ ಪಂದ್ಯವನ್ನು ಲಾರ್ಡ್ಸ್ ನಿಂದ ಸ್ಥಳಾಂತರಿಸಲು ತೀರ್ಮಾನಿಸಿತ್ತು. ಇದೀಗ ಸೌಥಾಂಪ್ಟನ್ ನಲ್ಲಿ ಪಂದ್ಯ ನಡೆಯುವುದು ಪಕ್ಕಾ ಆಗಿದೆ.

ಸೌಥಾಂಪ್ಟನ್ ಮೈದಾನದಿಂದ ಕ್ರಿಕೆಟಿಗರು ಉಳಿದುಕೊಳ್ಳಲಿರುವ ಹೋಟೆಲ್ ರೂಂಗೂ ಹೆಚ್ಚು ದೂರವಿಲ್ಲ. ಇದು ಕ್ರಿಕೆಟಿಗರಿಗೆ ಅನುಕೂಲಕವಾಗಲಿದೆ ಎಂಬ ಕಾರಣಕ್ಕೆ ಇಲ್ಲಿ ಪಂದ್ಯ ಆಯೋಜಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ವಿ ವಾಂಟ್ ಸಂಜು ಎಂದು ಜೋರಾಗಿ ಕೂಗಿದ ಫ್ಯಾನ್ಸ್: ಗಂಭೀರ್, ತಿಲಕ್ ವರ್ಮ ಮುಖಭಾವ ನೋಡಬೇಕು Video

IND vs ENG: ಟೀಂ ಇಂಡಿಯಾ ಹೀನಾಯವಾಗಿ ಸೋತ ಮೇಲೂ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ಹೀಗೆ ಹೇಳೋದಾ Video

IND vs ENG: ಇಂದು ವೈಭವ್ ಸೂರ್ಯವಂಶಿ ಆಡೋದು ಡೌಟ್, ಎಲ್ಲದಕ್ಕೂ ಕನ್ನಡಿಗ ರಘು ಕಾರಣ Video

ವಿಶ್ವಕಪ್ ಹೀರೋಗೆ ಶಾಕ್: ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಗೆ ಕೊಕ್

ಅಟೋಗ್ರಾಫ್ ಗಾಗಿ ಅಭಿಮಾನಿ ಕೊಟ್ಟ ಪೆನ್ನು ಸರಿ ಇರಲಿಲ್ಲವೆಂದು ವೈಭವ್ ಸೂರ್ಯವಂಶಿ ಮಾಡಿದ್ದೇನು ಗೊತ್ತಾ Video

ಮುಂದಿನ ಸುದ್ದಿ
Show comments