Select Your Language

Notifications

webdunia
webdunia
webdunia
webdunia

ಸಿಕ್ಸರ್ ಸಿಡಿಸುವ ಸಾಮರ್ಥ್ಯದಲ್ಲಿ ನನ್ನ ನಂಬಿಕೆ ಹೆಚ್ಚಿದೆ: ವಿರಾಟ್ ಕೊಹ್ಲಿ

ಸಿಕ್ಸರ್ ಸಿಡಿಸುವ ಸಾಮರ್ಥ್ಯದಲ್ಲಿ ನನ್ನ ನಂಬಿಕೆ ಹೆಚ್ಚಿದೆ: ವಿರಾಟ್ ಕೊಹ್ಲಿ
ಕೋಲ್ಕತಾ: , ಸೋಮವಾರ, 16 ಮೇ 2016 (19:13 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ 9ನೇ ಆವೃತ್ತಿಯಲ್ಲಿ 3 ಶತಕಗಳೊಂದಿಗೆ ಅಬ್ಬರಿಸಿದ್ದು, ಸಿಕ್ಸರುಗಳನ್ನು ಹೊಡೆಯುವ ತನ್ನ ಸಾಮರ್ಥ್ಯದ ಬಗ್ಗೆ ತಮಗೆ ಹೆಚ್ಚು ನಂಬಿಕೆ ಬರುತ್ತಿರುವುದಾಗಿ ತಿಳಿಸಿದರು. ಕೊಹ್ಲಿ ಇಲ್ಲಿಯವರೆಗೆ 677 ರನ್‌ಗಳಲ್ಲಿ 25 ಸಿಕ್ಸರುಗಳನ್ನು ಸಿಡಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅವರ ಸಿಕ್ಸರ್ ಹಸಿವು ಮತ್ತಷ್ಟು ಹೆಚ್ಚುವಂತೆ ಕಂಡುಬಂದಿದ್ದಾರೆ. 
 
ಮೊದಲ 20-25 ಎಸೆತಗಳಲ್ಲಿ ಚೆಂಡಿಗೊಂದು ರನ್ ತೆಗೆದರೆ ಚಿಂತೆಯಿಲ್ಲ. ಏಕೆಂದರೆ ಮುಂದಿನ 15 ಎಸೆತಗಳಲ್ಲಿ 40-45 ರನ್‌ಗಳನ್ನು ಗಳಿಸಬಲ್ಲೆ. ಈಗ ಅಂತಿಮ ಓವರುಗಳಲ್ಲಿ ಸಿಕ್ಸರುಗಳನ್ನು ಸಿಡಿಸುವ ಮತ್ತು ಗ್ಯಾಪ್‌ನಲ್ಲಿ ಬೌಂಡರಿಗಳನ್ನು ಚಚ್ಚುವ ಸಾಮರ್ಥ್ಯದ ಬಗ್ಗೆ ಹೆಚ್ಚು ನಂಬಿಕೆ ಇರಿಸಿದ್ದೇನೆ ಎಂದು ಗುಜರಾತ್ ಲಯನ್ಸ್ ವಿರುದ್ಧ 8ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಕೊಹ್ಲಿ ಹೇಳಿದ್ದಾರೆ. 
 
ಸಂಪೂರ್ಣವಾಗಿ ಆತ್ಮವಿಶ್ವಾಸದಿಂದ ಇರುವ ಸಮಯ ಇರುತ್ತದೆ. ಅದೇ ಸಂದರ್ಭದಲ್ಲಿ ಆಟಗಾರ ಆಟಕ್ಕೆ ಗೌರವವನ್ನೂ ನೀಡಬೇಕಾಗುತ್ತದೆ. ಕ್ರೀಡೆಯನ್ನು ನೀವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೊನೆಯ ಪಂದ್ಯದಲ್ಲಿ ನಾನು ಡಾನ್ ವಿಟ್ಟೋರಿಗೆ ಟಿಮ್ ಸೌಥಿಯ ಮೊದಲ ಓವರಿನ ಪ್ರತಿಯೊಂದು ಎಸೆತವನ್ನು ಸಿಕ್ಸರ್ ಸಿಡಿಸಬಹುದೆಂಬುದು ನನ್ನ ಭಾವನೆ ಎಂದು ಹೇಳಿದ್ದೆ. ಆದರೆ ನಾನು ಕ್ರೀಡೆಗೆ ಅವಮರ್ಯಾದೆ ಮಾಡುವುದು ಇಷ್ಟವಿಲ್ಲವಾದ್ದರಿಂದ ನಿಲ್ಲಿಸಿದೆ. ಪ್ರತಿ ಬಾರಿ ಬ್ಯಾಟಿಂಗ್‌ಗೆ ಇಳಿದಾಗಲೂ ನನ್ನ ಇನ್ನಿಂಗ್ಸ್ ಕಟ್ಟಲು ಬಯಸಿದೆ ಎಂದು ಕೊಹ್ಲಿ ಹೇಳಿದ್ದಾರೆ. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಲಿ ವಿರುದ್ಧ ಜಯಗಳಿಸಿ ಮೂರನೇ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್