Select Your Language

Notifications

webdunia
webdunia
webdunia
webdunia

ಟೊಮೆಟೊ ಮರ ಇದ್ದಿದ್ದರೆ ನೇಣು ಹಾಕಿಕೊಳ್ತಿದ್ದೆ: ಮಕಾಯ ಟಿನಿ ಪ್ರತಿಕ್ರಿಯೆ

ಟೊಮೆಟೊ ಮರ ಇದ್ದಿದ್ದರೆ ನೇಣು ಹಾಕಿಕೊಳ್ತಿದ್ದೆ: ಮಕಾಯ ಟಿನಿ ಪ್ರತಿಕ್ರಿಯೆ
ಹರಾರೆ , ಮಂಗಳವಾರ, 14 ಜೂನ್ 2016 (18:40 IST)
ಎರಡನೇ ಸಾಲಿನ ಆಟಗಾರರಿಂದ ಕೂಡಿದ ಭಾರತ ತಂಡ ಪೂರ್ಣ ಬಲದ ಜಿಂಬಾಬ್ವೆ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ 2-0 ಯಿಂದ ಸರಣಿ ಗೆದ್ದ ಬಳಿಕ ಜಿಂಬಾಬ್ವೆ ಮಧ್ಯಾಂತರ ಕೋಚ್ ಮಕಾಯ ಟಿನಿ ಮುಖದಲ್ಲಿ ನಿರಾಶೆಯ ಭಾವ ತುಂಬಿತ್ತು. ಕೆಲವು ಅಭಿಮಾನಿಗಳು ಕೂಡ ನಿರಾಶೆಯನ್ನು ತೋರಿಸಿದರು.

ನಾನು ಹೆಚ್ಚುಕಡಿಮೆ ನೇಣು ಹಾಕಿಕೊಂಡ ಸ್ಥಿತಿಯಾಗಿತ್ತು. ಹೊರಗೆ ಟೊಮೇಟೊ ಮರ ಇದ್ದಿದ್ದರೆ ನಾನು ನೇಣಿಗೆ ಶರಣಾಗುತ್ತಿದ್ದೆ ಎಂದು ಮಕಾಯ ಟಿನಿ ಹೇಳಿದ್ದಾರೆ. 
 
ನಮ್ಮ ಬಳಿ ಅನುಭವಿ ಆಟಗಾರರಿದ್ದರೂ ಗೆಲ್ಲಲಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.  ಜಿಂಬಾಬ್ವೆಯ ನೀರಸ ಪ್ರದರ್ಶನದಿಂದ ಕೆಲವು ಬೆಂಬಲಿಗರು ಆಟಗಾರರ ವಿರುದ್ಧ ಪ್ರತಿಭಟನೆ ನಡೆಸಿದರು. ಭಾರತದ ಚೇಸ್‌ನ ಆರಂಭದ ಹಂತಗಳಲ್ಲಿ  ಬ್ಯಾನರ್‌ಗಳನ್ನು ಹಿಡಿದು ಸೀಟಿಗಳನ್ನು ಊದಿದರು. ಒಂದು ಭಿತ್ತಿಪತ್ರದಲ್ಲಿ ''ನಾವು  ಮಹಾ ಪ್ರಮಾಣದ ವಿನಾಶವನ್ನು, ಪ್ರಕೋಪವನ್ನು ಬೆಂಬಲಿಸುವುದಿಲ್ಲ'' ಎಂದು ಬರೆದಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 24ರಂದು ಬಿಸಿಸಿಐನಿಂದ ಹೊಸ ಹೆಡ್ ಕೋಚ್ ನೇಮಕ