ಬಿಸಿಸಿಐ ಭಾರತದ ನೂತನ ಕೋಚ್ ರನ್ನು ಜೂನ್ 24ರಂದು ಹೆಸರಿಸಲಿದ್ದು, ಮಂಡಳಿಯ ಕಾರ್ಯಕಾರಿ ಸಮಿತಿಯು ಮುಂದಿನ ಶುಕ್ರವಾರ ಧರ್ಮಶಾಲಾದಲ್ಲಿ ಭೇಟಿಯಾಗಿ ಚರ್ಚೆ ನಡೆಸಲಿದೆ.
ಉನ್ನತ ಕೋಚ್ ಹುದ್ದೆಗೆ ರವಿ ಶಾಸ್ತ್ರಿ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮತ್ತು ಸಂದೀಪ್ ಪಾಟೀಲ್ ಮುಂತಾದವರು ರೇಸ್‌ನಲ್ಲಿದ್ದಾರೆ. ಭಾರತ ವೆಸ್ಟ್ ಇಂಡೀಸ್ ಸರಣಿಗೆ ನಾಲ್ಕು ಟೆಸ್ಟ್ ಆಡಲು ತೆರಳುವುದಕ್ಕೆ 2 ವಾರಗಳಿಗೆ ಮುಂಚಿತವಾಗಿ ಹೊಸ ಕೋಚ್‌ರನ್ನು ಗುರುತಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಔಪಚಾರಿಕ ಸಂದರ್ಶನ ಸುತ್ತುಗಳನ್ನು ನಿರ್ವಹಿಸಿದ ಬಳಿಕ ಮಂಡಳಿಯ ಹೊಸ ಗೌರವ ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಸೂಕ್ತ ಅಭ್ಯರ್ಥಿಗಳ ಪಟ್ಟಿ ಮಾಡುವ ಕೆಲಸವನ್ನು ನೀಡಲಾಗಿದೆ.
2015ರ ಐಸಿಸಿ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾರತ ನಿರ್ಗಮಿಸಿದ ಬಳಿಕ ಡಂಕನ್ ಫ್ಲೆಚ್ಚರ್ ಕೋಚ್ ಕಾಲಾವಧಿಯು ಮುಗಿದಿತ್ತು. ಅದಾದ ನಂತರ ಹೊಸ ಕೋಚ್ ನೇಮಕ ಮಾಡಿರಲಿಲ್ಲ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ