ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

Krishnaveni K
ಬುಧವಾರ, 10 ಡಿಸೆಂಬರ್ 2025 (10:53 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಜಯ್  ಹಜಾರೆ ಟ್ರೋಫಿ ಆಡಬಹುದು ಎಂಬ ವದಂತಿಗಳಿವೆ. ಅವರು ಒಂದು ಪಂದ್ಯ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ. ಸದ್ಯಕ್ಕೆ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದರೂ ಅವರ ಚಾರ್ಮ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆಟದಲ್ಲೂ ಅದೇ ಖದರ್ ಇದೆ. ಹಾಗಿದ್ದರೂ ಮುಂದಿನ ಸರಣಿ ಆಡುವ ಮೊದಲು ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ಆಡಬಹುದು ಎಂಬ ಸುದ್ದಿಗಳಿತ್ತು.

ಇದು ಇನ್ನೂ ಖಚಿತವಾಗಿಲ್ಲ. ಹಾಗಿದ್ದರೂ ಅವರು ಒಂದು ವೇಳೆ ಆಡಿದರೂ ಅವರಿಗೆ ಒಂದು ಪಂದ್ಯಕ್ಕೆ ಸಿಗುವ ಸಂಭಾವನೆ ಕೇವಲ 50,000 ರೂ. ವಿರಾಟ್ ಕೊಹ್ಲಿ ಹೇಳಿ ಕೇಳಿ ಕೋಟ್ಯಾಂತರ ರೂಪಾಯಿಗಳ ಒಡೆಯ. ಅವರು ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಮಾಡಿದರೆ 5 ಕೋಟಿ ರೂ.ಗಳಷ್ಟು ದುಡಿಯುತ್ತಾರೆ.

ಆದರೆ ದೇಶೀಯ ಕ್ರಿಕೆಟ್ ನಲ್ಲಿ ಆಡುವುದರಿಂದ ಅವರಿಗೆ ಸಿಗುವ ಸಂಭಾವನೆ ಪಾಕೆಟ್ ಮನಿಯಷ್ಟೂ ಅಲ್ಲ. ಹಾಗಿದ್ದರೂ ಸಂಭಾವನೆ ಇಲ್ಲಿ ಲೆಕ್ಕಕ್ಕೆ ಬರಲ್ಲ. ಒಂದು ವೇಳೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕು ಎಂದರೆ ಅವರು ಆಡಲೇಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮದುವೆ ಮುರಿದಿದ್ದಕ್ಕೆ ಕುಗ್ಗಿದ್ದಾರಾ ಸ್ಮೃತಿ ಮಂಧಾನ: ಒಂದೇ ಸಾಲಿನಲ್ಲಿ ಕೊಟ್ರು ಉತ್ತರ

ಮುಂದಿನ ಸುದ್ದಿ
Show comments