Select Your Language

Notifications

webdunia
webdunia
webdunia
webdunia

ದ. ಆಫ್ರಿಕಾ-ಶ್ರೀಲಂಕಾ ಏಕದಿನ ಪಂದ್ಯದಲ್ಲಿ ಜೇನು ನೊಣದ್ದೇ ಕಾರುಬಾರು!

ದ. ಆಫ್ರಿಕಾ-ಶ್ರೀಲಂಕಾ ಏಕದಿನ ಪಂದ್ಯದಲ್ಲಿ ಜೇನು ನೊಣದ್ದೇ ಕಾರುಬಾರು!
Johansburg , ಭಾನುವಾರ, 5 ಫೆಬ್ರವರಿ 2017 (09:26 IST)
ಜೊಹಾನ್ಸ್ ಬರ್ಗ್: ಕ್ರಿಕೆಟ್ ಮೈದಾನದಲ್ಲಿ ಹೀಗೆ ಆಗುವುದು ಇದೇ ಮೊದಲೇನಲ್ಲ. ಆದರೂ ದ. ಆಫ್ರಿಕಾ ಮತ್ತು ಶ್ರೀಲಂಕಾ ನಡುವೆ ವಾಂಡರರ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದೆ.

 
ಪಂದ್ಯ ನಡೆಯುತ್ತಿದ್ದಾಗ ಜೇನು ನೊಣ ದಾಳಿ ಮಾಡಿ ಕೆಲ ಕಾಲ ಪಂದ್ಯವನ್ನೇ ನಿಲ್ಲಿಸಿದೆ. ಅಲ್ಲದೆ ಆಟಗಾರರು, ಅಂಪಾಯರ್ ಗಳನ್ನು ಮಕಾಡೆ ಮಲಗಿಸಿದೆ. ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದಾಗ 25 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ.

ಆಟಗಾರರು ಕೆಲ ಕಾಲ ಮೈದಾನ ಬಿಟ್ಟು ತೆರಳಬೇಕಾಗಿ ಬಂತು. ಮತ್ತೊಮ್ಮೆ ಮೈದಾನಕ್ಕಿಳಿದರೂ, ಪುನಃ ಜೇನು ನೊಣಗಳ ದಾಳಿಯಿಂದ ಸುಮಾರು 20 ನಿಮಿಷ ಪಂದ್ಯ ತಡವಾಯಿತು. ಮೈದಾನದ ಸಿಬ್ಬಂದಿ ಜೇನು ನೊಣಗಳನ್ನು ಓಡಿಸಲು ಇನ್ನಿಲ್ಲದ ಸಾಹಸ ಮಾಡಿದರು. ಆದರೆ ಅದೃಷ್ಟವಶಾತ್ ಪಂದ್ಯದ ಓವರ್ ಕಡಿತ ಮಾಡಬೇಕಾಗಿ ಬರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಇಂಗ್ಲೆಂಡ್ ಕ್ರಿಕೆಟಿಗನಿಗೆ ಇದೀಗ ಐಪಿಎಲ್ ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು!