Select Your Language

Notifications

webdunia
webdunia
webdunia
webdunia

ಮೊದಲ ಪಂದ್ಯದಲ್ಲಿ ಮಿಂಚಿದ ಹರ್ಷಲ್ ಪಟೇಲ್ ಹೇಳಿದ್ದೇನು?

ಮೊದಲ ಪಂದ್ಯದಲ್ಲಿ ಮಿಂಚಿದ ಹರ್ಷಲ್ ಪಟೇಲ್ ಹೇಳಿದ್ದೇನು?
ರಾಂಚಿ , ಶನಿವಾರ, 20 ನವೆಂಬರ್ 2021 (10:11 IST)
ರಾಂಚಿ: ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ಸರಿಯಾಗಿಯೇ ಸದ್ಬಳಕೆ ಮಾಡಿರುವ ಆರ್ ಸಿಬಿ ವೇಗಿ ಹರ್ಷಲ್ ಪಟೇಲ್ ತಮ್ಮ ಯಶಸ್ಸಿನ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಯಶಸ್ಸಿಗೆ ಎಬಿಡಿ ವಿಲಿಯರ್ಸ್ ಕೊಡುಗೆ ಅಪಾರ ಎಂದಿದ್ದಾರೆ. ಅವರನ್ನು ನೋಡುತ್ತಾ ಕಲಿತೆ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

‘ಯುಎಇನಲ್ಲಿ ಐಪಿಎಲ್ ವೇಳೆ ಅವರು ನನ್ನ ಬೌಲಿಂಗ್ ಬಗ್ಗೆ ಸಲಹೆ ನೀಡಿದರು. ಒಳ್ಳೆಯ ಎಸೆತಗಳಿಗೂ ಬ್ಯಾಟರ್ ಹೊಡೆದರೆ ಮತ್ತೆ ಮತ್ತೆ ಅಂತಹದ್ದೇ ಎಸೆತ ಹಾಕಿ ಆತನನ್ನು ಹೊಡೆಯಲು ಪ್ರೇರೇಪಿಸಬೇಕು. ಅದನ್ನೇ ನಾನು ಮಾಡಿದೆ. ಇದರಿಂದ ಸಾಕಷ್ಟು ಯಶಸ್ಸು ಗಳಿಸಿದೆ’ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಜಿಲೆಂಡ್ ಟಿ20 ಸರಣಿ ಗೆದ್ದ ಟೀಂ ಇಂಡಿಯಾ