ಧೋನಿಯಷ್ಟು ಒಳ್ಳೆ ಬುದ್ಧಿ ನಿಮಗೆ ಬರಲ್ಲ! ಹಾರ್ದಿಕ್ ಪಾಂಡ್ಯಗೆ ನೆಟ್ಟಿಗರ ತಪರಾಕಿ

Webdunia
ಗುರುವಾರ, 10 ಆಗಸ್ಟ್ 2023 (08:20 IST)
ಗಯಾನ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿನ ರನ್ ಬಾರಿಸಿದರೂ ನೆಟ್ಟಿಗರು ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಹಾರ್ದಿಕ್ ಬಾರಿಸಿದ ಸಿಕ್ಸರ್ ನಿಂದ ಯುವ ಬ್ಯಾಟಿಗ ತಿಲಕ್ ವರ್ಮಗೆ ಸತತ ಎರಡನೇ ಅರ್ಧಶತಕ ಗಳಿಸುವ ಅವಕಾಶ ಮಿಸ್ ಆಗಿದ್ದು. ಭಾರತದ ಗೆಲುವಿಗೆ ಎರಡು ರನ್ ಬೇಕಾಗಿತ್ತು. 17 ನೇ ಓವರ್ ಮುಕ್ತಾಯದ ಹಂತದಲ್ಲಿತ್ತು. ನಾಲ್ಕನೇ ಎಸೆತದಲ್ಲಿ ತಿಲಕ್ ವರ್ಮ ಒಂಟಿ ರನ್ ಗಳಿಸಲಷ್ಟೇ ಸಾಧ‍್ಯವಾಯಿತು. ಇದರಿಂದ ಅವರು ಅರ್ಧಶತಕಕ್ಕೆ ಒಂದು ರನ್ ಕೊರತೆಯಲ್ಲಿದ್ದರು.

ಆಗ ಹಾರ್ದಿಕ್ ಪಾಂಡ್ಯ ಐದನೇ ಎಸೆತ ಎದುರಿಸಿ ಸಿಕ್ಸರ್ ಬಾರಿಸಿ ಭಾರತ ತಂಡಕ್ಕೆ ಗೆಲುವು ಕೊಡಿಸಿದರು. ಆದರೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ತಿಲಕ್  ವರ್ಮಗೆ ಅರ್ಧಶತಕ ಮಿಸ್ ಆಯಿತು. ಇದು ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದೊಮ್ಮೆ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಗೆಲುವಿನ ರನ್ ಗಳಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕಾಗಿ ಸಿಂಗಲ್ಸ್ ಪಡೆಯದೇ ತ್ಯಾಗ ಮಾಡಿದ್ದರು. ಇಂದು ನಾಯಕನಾಗಿ ಹಾರ್ದಿಕ್ ಗೂ ಅದೇ ರೀತಿ ಧಾರಾಳ ಮನಸ್ಸು ತೋರುವ ಅವಕಾಶವಿತ್ತು. ಬಾಲ್, ವಿಕೆಟ್ ಎಲ್ಲವೂ ಸಾಕಷ್ಟಿದ್ದರೂ ಯುವ ಬ್ಯಾಟಿಗನಿಗೆ ಅರ್ಧಶತಕ ಗಳಿಸಲು ಅವಕಾಶ ಕೊಡಲಿಲ್ಲವೆಂದು ನೆಟ್ಟಿಗರು ಧೋನಿಯನ್ನು ನೆನಪಿಸಿ ನೀವು ಯಾವತ್ತೂ ಧೋನಿ ಹತ್ತಿರವೂ ಬರಲು ಸಾಧ‍್ಯವಾಗದು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಮುಂದಿನ ಸುದ್ದಿ
Show comments