ಗೃಹ ಸಚಿವ ಅಮಿತ್ ಶಾ ಜೊತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ

Krishnaveni K
ಮಂಗಳವಾರ, 13 ಫೆಬ್ರವರಿ 2024 (11:13 IST)
Photo Courtesy: Twitter
ಅಹಮ್ಮದಾಬಾದ್: ಟೀಂ ಇಂಡಿಯಾ ಕ್ರಿಕೆಟಿಗ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಗೃಹ ಸಚಿವ ಅಮಿತ್ ಶಾ ಜೊತೆ ಗಾಂಧಿನಗರ ಪ್ರೀಮಿಯರ್ ಲೀಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಹಾರ್ದಿಕ್ ಪಾಂಡ್ಯ ಗಾಯಗೊಂಡು ಸದ್ಯಕ್ಕೆ ಟೀಂ ಇಂಡಿಯಾದಿಂದ ದೂರವಿದ್ದಾರೆ. ಕಳೆದ ಏಕದಿನ ವಿಶ್ವಕಪ್ ವೇಳೆ ಕಾಲು ಟ್ವಿಸ್ಟ್ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಅವರು ಫಿಟ್ನೆಸ್ ಮರಳಿ ಪಡೆಯುತ್ತಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಇದೀಗ ಅಮಿತ್ ಶಾ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದೀಗ ಗುಜರಾತ್ ಪ್ರತಿಷ್ಠಿತ ಗಾಂಧಿನಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ್ದು, ದೈಹಿಕ ಆರೋಗ್ಯಕ್ಕಾಗಿ ಈ ಕ್ರೀಡಾ ಕೂಟಕ್ಕೆ ಚಾಲನೆ ನೀಡಿರುವುದಾಗಿ ಅಮಿತ್ ಶಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಕಮಲದ ಚಿಹ್ನೆಯಿರುವ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಹಾರ್ದಿಕ್ ಪಾಂಡ್ಯ ಜೊತೆಗೆ ಬಿಸಿಸಿಐ ಕಾರ್ಯದರ್ಶಿ, ಅಮಿತ್ ಶಾ ಪುತ್ರ ಜಯ್ ಶಾ ಕೂಡಾ ಉಪಸ್ಥಿತರಿದ್ದರು. ಗಾಂಧಿನಗರ ಲೋಕಸಭಾ ಕ್ಷೇತ್ರದ 7 ತಂಡಗಳ ನಡುವೆ ಟೂರ್ನಿ ನಡೆಯಲಿದೆ.

ಹಾರ್ದಿಕ್ ಪಾಂಡ್ಯ ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಟಿ20 ಮಾದರಿ ಕ್ರಿಕೆಟ್ ನ ನಾಯಕರಾಗಿದ್ದರು. ಆದರೆ ಗಾಯಗೊಂಡಿದ್ದರಿಂದ ದ.ಆಫ್ರಿಕಾ ವಿರುದ್ಧ ಸೂರ್ಯಕುಮಾರ್ ಯಾದವ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಖಾಯಂ ನಾಯಕ ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರು. ಮುಂಬರುವ ಐಪಿಎಲ್ ವೇಳೆಗೆ ಹಾರ್ದಿಕ್ ಫಿಟ್ ಆಗಿ ಕಣಕ್ಕೆ ಮರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಸಮಯ ವಿವರ ಇಲ್ಲಿದೆ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ

ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

ರವೀಂದ್ರ ಜಡೇಜಾರನ್ನು ಸೇಲ್ ಮಾಡಲು ಹೊರಟ ಸಿಎಸ್ ಕೆ: ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ ಫ್ಯಾನ್ಸ್ ಗರಂ

ಗಾಯಗೊಂಡು ತಂಡದಿಂದ ಹೊರಬಿದ್ದರೂ ಪ್ರತೀಕಾ ರಾವಲ್‌ಗೆ ಚಿನ್ನ ಪದಕ ಸಿಗಲು ಇವರ ಕೃಪೆಯೇ ಕಾರಣ

ಮುಂದಿನ ಸುದ್ದಿ
Show comments