ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಈಗ ಮತ್ತೆ ಕ್ರಿಕೆಟ್ ಕಣದಲ್ಲಿ ಜಗಳ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ಗಂಭೀರ್ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಬುಧವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಪಂದ್ಯ ನಡೆದಿತ್ತು. ಈ ವೇಳೆ ಗುಜರಾತ್ ತಂಡದ ವೇಗಿ ಎಸ್. ಶ್ರೀಶಾಂತ್ ಜೊತೆ ಗಂಭೀರ್ ವಾಗ್ವಾದ ನಡೆಸಿದ್ದಾರೆ.
ಇಬ್ಬರೂ ಆನ್ ಫೀಲ್ಡ್ ಘರ್ಷಣೆಗೆ ಹೆಸರುವಾಸಿ. ಶ್ರೀಶಾಂತ್ ಮೊದಲ ಎಸೆತದಲ್ಲಿ ಗಂಭೀರ್ ಸಿಕ್ಸರ್ ಸಿಡಿಸಿದರು. ಬಳಿಕ ಎರಡನೇ ಎಸೆತದಲ್ಲಿ ಬೌಂಡರಿ ಚಚ್ಚಿದರು. ಮೂರನೇ ಎಸೆತದಲ್ಲಿ ರನ್ ಬರಲಿಲ್ಲ. ಆಗ ಶ್ರೀಶಾಂತ್ ಕೆಣಕಿದ್ದಾರೆ.
ಇದು ಗಂಭೀರ್ ಗೆ ಸಿಟ್ಟು ತರಿಸಿದೆ. ಈ ವೇಳೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಅಂಪಾಯರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಿಸಿದ್ದಾರೆ.