Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಆಯ್ತು, ಈಗ ಗೌತಮ್ ಗಂಭೀರ್ ಸರದಿ: ಕೌಟುಂಬಿಕ ಕಾರಣಕ್ಕೆ ತವರಿಗೆ ವಾಪಸ್

Gautam Gambhir

Krishnaveni K

ಪರ್ತ್ , ಮಂಗಳವಾರ, 26 ನವೆಂಬರ್ 2024 (11:06 IST)
ಪರ್ತ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಕೌಟುಂಬಿಕ ಕಾರಣಕ್ಕೆ ಗೈರಾಗಿದ್ದರು. ಇದೀಗ ಕೋಚ್ ಗೌತಮ್ ಗಂಭೀರ್ ಸರದಿ. ಮೊದಲ ಟೆಸ್ಟ್ ಗೆಲುವಿನ ಬಳಿಕ ಗಂಭೀರ್ ಕೌಟುಂಬಿಕ ಕಾರಣಕ್ಕೆತವರಿಗೆ ವಾಪಸಾಗಿದ್ದಾರೆ.

ಪತ್ನಿಯ ಹೆರಿಗೆ ನಿಮಿತ್ತ ನಾಯಕ ರೋಹಿತ್ ಶಶರ್ಮಾ ಮೊದಲ ಟೆಸ್ಟ್ ಪಂದ್ಯಕ್ಕೆ ಗೈರಾಗಿದ್ದರು. ಇದೀಗ ಆಸ್ಟ್ರೇಲಿಯಾಗೆ ಬಂದಿಳಿದಿದ್ದು ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು ನಡೆಯಲಿರುವ ಅಭ್ಯಾಸ ಪಂದ್ಯದಲ್ಲೂ ಭಾಗಿಯಾಗಲಿದ್ದಾರೆ. ಇದೀಗ ಕೋಚ್ ಗೌತಮ್ ಗಂಭೀರ್ ತವರಿಗೆ ಮರಳಿದ್ದಾರೆ.

ಕೌಟುಂಬಿಕ ಕಾರಣಕ್ಕೆ ತುರ್ತಾಗಿ ಗಂಭೀರ್ ಭಾರತಕ್ಕೆ ಮರಳಿದ್ದಾರೆ. ಹೀಗಾಗಿ ಅವರು ಕ್ಯಾನ್ ಬೆರಾದಲ್ಲಿ ನಡೆಯಲಿರುವ ಎರಡು ದಿನಗಳ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಗೈರಾಗಲಿದ್ದಾರೆ. ಆದರೆ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ನಿನ್ನೆ ಮುಕ್ತಾಯವಾಗಿತ್ತು. ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೆ 10 ದಿನಗಳ ಬ್ರೇಕ್ ಇದೆ. ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ರೋಹಿತ್ ಜೊತೆಗೆ ಶುಬ್ಮನ್ ಗಿಲ್ ಕೂಡಾ ಕಮ್ ಬ್ಯಾಕ್ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ನಿಮ್ಮ ಪ್ರಕಾರ ಅತ್ಯುತ್ತಮ ಆಟಗಾರರನ್ನೊಳಗೊಂಡ ತಂಡ ಯಾವುದು