Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ವಿಕೆಟ್ ಪತನ: ಗೌತಮ್ ಗಂಭೀರ್ ಆಪ್ತ ರಾಜೀನಾಮೆ

Ryan Ten Doeschate
Photo Credit: X
ಗೌತಮ್ ಗಂಭೀರ್ ಅವರ ಆಪ್ತ ಹಾಗೂ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರ ರಯಾನ್ ಟೆನ್ ಡೋಸ್ಚೇಟ್  ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
 
ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾಗಿನಿಂದಲೂ ಇಬ್ಬರೂ ನಿಕಟ ಸಂಬಂಧ ಹೊಂದಿದ್ದಾರೆ. 2024 ರಲ್ಲಿ ಗಂಭೀರ್ ಭಾರತ ತಂಡದ ಮುಖ್ಯ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಾಗ, ತಮ್ಮ ಆಪ್ತರಾಗಿದ್ದ ರಯಾನ್ ಅವರನ್ನು ಭಾರತೀಯ ತರಬೇತುದಾರರ ಸಿಬ್ಬಂದಿಗೆ ಸೇರಿಸಿಕೊಂಡಿದ್ದರು.
 
ಬಿಸಿಐಸಿಐ ನೀಡಿದ್ದ 2 ವರ್ಷಗಳ ಒಪ್ಪಂದವು ಪೂರ್ಣಗೊಂಡಿದೆ. ಮಂಡಳಿಯು 2027 ರವರೆಗೆ ಒಪ್ಪಂದವನ್ನು ವಿಸ್ತರಿಸಲು ಆಫರ್ ನೀಡಿದ್ದರೂ, ವೈಯಕ್ತಿಕ ಕಾರಣ ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಅವರು ಅದನ್ನು ನಿರಾಕರಿಸಿದ್ದಾರೆ. ಇದರ ಜೊತೆಗೆ, ಐಪಿಎಲ್‌ನಲ್ಲಿ KKR ತಂಡದ ತರಬೇತುದಾರರಾಗಿ ಮರಳುವ ಸಾಧ್ಯತೆಗಳಿವೆ ಎಂದೂ ವರದಿಯಾಗಿದೆ.
 
ರಯಾನ್ ಟೆನ್ ಡೋಸ್ಚೇಟ್ ಅವರ ನಿರ್ಗಮನದ ಜೊತೆಗೆ, ಭಾರತ ತಂಡದ ಸುದೀರ್ಘ ಅವಧಿಯ ಫೀಲ್ಡಿಂಗ್ ತರಬೇತುದಾರ ಟಿ. ದಿಲೀಪ್ ಅವರ ಸೇವಾ ಅವಧಿಯೂ ಮುಕ್ತಾಯಗೊಂಡಿದೆ. ಅವರ ಸ್ಥಾನಕ್ಕೆ ಶುಭದೀಪ್ ಘೋಷ್ ಅವರನ್ನು ನೂತನ ಫೀಲ್ಡಿಂಗ್ ತರಬೇತುದಾರರಾಗಿ ನೇಮಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ