Publish Date: Thu, 19 Jan 2017 (10:10 IST)
Updated Date: Thu, 19 Jan 2017 (10:12 IST)
ಮುಂಬೈ: ಸುಪ್ರೀಂ ಕೋರ್ಟ್ ಆದೇಶದಂತೆ ಪದಚ್ಯುತಗೊಂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉನ್ನತಾಧಿಕಾರಿಗಳ ಸ್ಥಾನಕ್ಕೆ ಹೊಸ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆ ಶುಕ್ರವಾರ ನಡೆಯುವ ಸಾಧ್ಯತೆಯಿದೆ.
ನ್ಯಾಯಾಲಯದ ಆದೇಶದಂತೆ ಜನವರಿ 19 ರೊಳಗಾಗಿ ಬಿಸಿಸಿಐಗೆ ಉನ್ನತ ಅಧಿಕಾರಿಗಳನ್ನು ನೇಮಿಸಬೇಕಿದೆ. ಅದರಂತೆ ನ್ಯಾಯಾಲಯ ತಾನು ನೇಮಿಸಿದ ಸಲಹೆಗಾರರು ಸೂಚಿಸಿದ ಹೆಸರುಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಇನ್ನು ಕೆಲವು ಮೂಲಗಳ ಪ್ರಕಾರ ಇದು ಒಂದು ದಿನ ಮುಂದೂಡಲಿರುವ ಸಾಧ್ಯತೆಯೂ ಇದ್ದು, ಶನಿವಾರದ ವೇಳೆಗೆ ಆಡಳಿತಾಧಿಕಾರಿಗಳನ್ನು ಅಂತಿಮ ಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದು ಸತ್ಯ ಎಂದು ಗೊತ್ತಿಲ್ಲ. ಆದರೆ ಈ ವಾರಾಂತ್ಯಕ್ಕೆ ಬಿಸಿಸಿಐಗೆ ಹೊಸ ಬಾಸ್ ಬರುವುದಂತೂ ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ