Select Your Language

Notifications

webdunia
webdunia
webdunia
webdunia

ಕೊನೆಯ ಪಂದ್ಯದಲ್ಲೂ ನಾಯಕ ಧೋನಿಯನ್ನು ಆರಾಮವಾಗಿರಲು ಬಿಡದ ಎದುರಾಳಿಗಳು!

ಕೊನೆಯ ಪಂದ್ಯದಲ್ಲೂ ನಾಯಕ ಧೋನಿಯನ್ನು ಆರಾಮವಾಗಿರಲು ಬಿಡದ ಎದುರಾಳಿಗಳು!
Mumbai , ಮಂಗಳವಾರ, 10 ಜನವರಿ 2017 (21:17 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದದ್ದು ಕೇವಲ ಅಭ್ಯಾಸ ಪಂದ್ಯ. ಆದರೂ ಧೋನಿಗೆ ನಾಯಕನಾಗಿ ಇದು ಕೊನೆಯ ಪಂದ್ಯವಾಗಿತ್ತು. ಕೊನೆಯ ಪಂದ್ಯದಲ್ಲೂ ಆರಾಮವಾಗಿರಲು ಎದುರಾಳಿಗಳು ಬಿಡಲಿಲ್ಲ.


ಗೆಲುವಿಗೆ 305 ರನ್ನುಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಅಂತಿಮ ಓವರ್ ವರೆಗೆ ಪಂದ್ಯ ಕೊಂಡೊಯ್ದು ತಲೆ ನೋವು ತಂದೊಡ್ಡಿತು. ಧೋನಿ ಹಿಂದಿನಂತೆ ಅಂತಿಮ ಓವರ್ ನಲ್ಲಿ ಪಂದ್ಯ ಉಳಿಸಿಕೊಳ್ಳಲು ಹೆಣಗಾಡಿದರು. ಆದರೂ ಫಲ ಕೊಡಲಿಲ್ಲ. ಇಂಗ್ಲೆಂಡ್ ಇನ್ನೂ ಒಂದು ಓವರ್ ಬಾಕಿಯಿರುವಂತೆ 3 ವಿಕೆಟ್ ಗಳಿಂದ ಪಂದ್ಯ ಗೆದ್ದಿತು.

ಇದರೊಂದಿಗೆ ಧೋನಿಗೆ ನಾಯಕನಾಗಿ ಸೋಲಿನ ವಿದಾಯ ಸಿಕ್ಕಂತಾಯಿತು. ಇಂಗ್ಲೆಂಡ್ ಪರ ಎಸ್ ಬಿಲ್ಲಿಂಗ್ಸ್ 93 ರನ್ ಗಳಿಸಿ ಶತಕ ವಂಚಿತರಾದರು. ಇದೊಂದು ಅಭ್ಯಾಸ ಪಂದ್ಯವೇ ಆದರೂ ತಮ್ಮ ನೆಚ್ಚಿನ ನಾಯಕ ಸೋಲಿನೊಂದಿಗೆ ಕ್ಯಾಪ್ಟನ್ ಕ್ಯಾಪ್ ಕೆಳಗಿಟ್ಟಿದ್ದು, ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಆದರೆ ಧೋನಿ ಮಾತ್ರ ಎಂದಿನಂತೆ ಶಾಂತಮೂರ್ತಿಯಾಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭ್ಯಾಸ ಪಂದ್ಯದಲ್ಲಿ ಸಿಡಿದೆದ್ದ ಧೋನಿ