Select Your Language

Notifications

webdunia
webdunia
webdunia
webdunia

ಅಭ್ಯಾಸ ಪಂದ್ಯದಲ್ಲಿ ಸಿಡಿದೆದ್ದ ಧೋನಿ

ಅಭ್ಯಾಸ ಪಂದ್ಯದಲ್ಲಿ ಸಿಡಿದೆದ್ದ ಧೋನಿ
Mumbai , ಮಂಗಳವಾರ, 10 ಜನವರಿ 2017 (17:39 IST)
ಮುಂಬೈ: ಅಭ್ಯಾಸ ಪಂದ್ಯಕ್ಕೂ ಇಷ್ಟೊಂದು ಪ್ರಾಮುಖ್ಯತೆ ಬಂದಿತ್ತು ಎಂದರೆ ಎಲ್ಲವೂ ಧೋನಿ ಮಹಿಮೆ. ಕೊನೆಯ ಬಾರಿಗೆ ನಾಯಕರಾಗಿ ಧೋನಿ ಆಡುತ್ತಿರುವ ಪಂದ್ಯ ಇದಾಗಿದ್ದರಿಂದ ಧೋನಿಗೆ ಇಲ್ಲಿ ಭಾರೀ ಚಪ್ಪಾಳೆಯ ಸ್ವಾಗತ ದೊರೆಯಿತು.


ಈ ಪಂದ್ಯದಲ್ಲಿ ಅಂಬುಟಿ ರಾಯುಡು ಶತಕ ದಾಖಲಿಸಿ ಧೋನಿಗೆ ಬ್ಯಾಟ್ ಮಾಡಲು ಕ್ರೀಸ್ ಬಿಟ್ಟುಕೊಟ್ಟರು. ನಂತರ ಧೋನಿ ಮೈದಾನಕ್ಕಿಳಿದಾಗ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ತಮ್ಮ ನೆಚ್ಚಿನ ನಾಯಕನಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಬ್ಯಾಟಿಂಗ್ ಗೆ ಇಳಿದ ಧೋನಿ, ಹಳೆಯ ದಿನಗಳನ್ನು ನೆನಪಿಸುವಂತೆ ಬ್ಯಾಟ್ ಬೀಸಿದರು. ಕೇವಲ 40 ಬಾಲ್ ಗಳಲ್ಲಿ 68 ರನ್ ಗಳಿಸಿ ಪ್ರೇಕ್ಷಕರಿಗೆ ರಂಜಿಸಿದ್ದಲ್ಲದೆ, ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು. ಭಾರತ ಮೊದಲು ಬ್ಯಾಟಿಂಗ್ ಮಾಡಿ 304 ರನ್ ಗಳಿಸಿತು.

ಇಂಗ್ಲೆಂಡ್ ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿಯೂ ಇಲ್ಲದ ಕಾರಣ, ಧೋನಿ ಇದೇ ರೀತಿ ಆಡಿ ಹಿಂದಿನ ಬ್ಯಾಟಿಂಗ್ ವೈಭವವನ್ನು ಮರಳಿಸಬಹುದೆಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಮುಂಬೈ