Publish Date: Thu, 12 Jul 2018 (09:15 IST)
Updated Date: Thu, 12 Jul 2018 (09:17 IST)
ನವದೆಹಲಿ: ಫಿಫಾ 2018 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಫೈನಲ್ ನಲ್ಲಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ಎದುರಾಗಲಿವೆ.
ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ ಕ್ರೊವೇಷಿಯಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಕೂಟದ ಆರಂಭದಿಂದಲೂ ಅಚ್ಚರಿಯ ಫಲಿತಾಂಶಗಳನ್ನೇ ನೀಡುತ್ತಿದ್ದ ಕ್ರೊವೇಷಿಯಾ ಇಂದೂ ಕೂಡಾ ದೈತ್ಯ ಸಂಹಾರಿಯಾಯಿತು. ಕ್ರೊವೇಷಿಯಾ ಪರ 109 ನೇ ನಿಮಿಷದಲ್ಲಿ ಮಾರಿಯೋ ಮಾನ್ಜುಕಿಕ್ ಗೋಲು ಗಳಿಸಿ ತಮ್ಮ ತಂಡಕ್ಕೆ ಗೆಲುವು ನೀಡಿದರು.
ಅತ್ತ ಫ್ರಾನ್ಸ್ ಬೆಲ್ಜಿಯಂ ತಂಡವನ್ನು 1-0 ಅಂತರದಿಂದ ಸೋಲಿಸಿ ಫೈನಲ್ ಗೇರಿತ್ತು. ಭಾನುವಾರ ರಾತ್ರಿ ಫೈನಲ್ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ಈ ಪಂದ್ಯವನ್ನು ಕಾತುರದಿಂದ ಎದುರು ನೋಡುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.