ಟಿ20 ವಿಶ್ವಕಪ್ ಗೆ ರಿಷಬ್ ಪಂತ್: ಸಂಜು ಸ್ಯಾಮ್ಸನ್ ಏನು ತಪ್ಪು ಮಾಡಿದ್ದಾರೆ ಎಂದು ಫ್ಯಾನ್ಸ್ ಆಕ್ರೋಶ

Krishnaveni K
ಬುಧವಾರ, 10 ಏಪ್ರಿಲ್ 2024 (10:18 IST)
Photo Courtesy: Twitter
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಅಂತಿಮ ಬಳಗ ಬಹುತೇಕ ಫೈನಲೈಸ್ ಆಗುತ್ತಿದೆ. ಈ ನಡುವೆ ರಿಷಬ್ ಪಂತ್ ರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎಂಬ ಸುದ್ದಿ ಓಡಾಡುತ್ತಿದೆ.

ಇದು ಸಂಜು ಸ್ಯಾಮ್ಸನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಐಪಿಎಲ್ ನಲ್ಲಿ ಸಂಜು ಸ್ಯಾಮ್ಸನ್ ನಾಯಕನಾಗಿ ಮತ್ತು ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಸ್ಯಾಮ್ಸನ್ ಗೆ ಟೀಂ ಇಂಡಿಯಾದಲ್ಲಿ ಸರಿಯಾಗಿ ಅವಕಾಶ ಕೊಡದೇ ವಂಚಿಸಲಾಗುತ್ತಿದೆ ಎಂಬುದು ಅವರ ಅಭಿಮಾನಿಗಳ ಆರೋಪ.

ಇದೀಗ ಟಿ20 ವಿಶ್ವಕಪ್ ತಂಡಕ್ಕೂ ಸ್ಯಾಮ್ಸನ್ ಗೆ ಅವಕಾಶ ನೀಡದೇ ಸಾಧಾರಣ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಗೆ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಕೆಂಗಣ‍್ಣಿಗೆ ಗುರಿಯಾಗಿದೆ. ಒಂದು ವರ್ಷದ ಬಳಿಕ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ ರಿಷಬ್ ಈ ಐಪಿಎಲ್ ನಲ್ಲಿ ಇದುವರೆಗೆ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.

ಹೇಗಿದ್ದರೂ ವಿಕೆಟ್ ಕೀಪರ್ ಆಗಿ ಇಬ್ಬರಿಗೆ ಅವಕಾಶ ನೀಡಬಹುದಾಗಿದೆ. ಹೀಗಿದ್ದಲ್ಲಿ ಕೆಎಲ್ ರಾಹುಲ್, ಜಿತೇಶ್ ಶರ್ಮಾ ಮೊದಲಾದವರ ಬದಲು ರಿಷಬ್ ಪಂತ್ ಜೊತೆಗೆ ಸಂಜು ಸ್ಯಾಮ್ಸನ್ ಗೆ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ಕೊಡಿ ಎಂಬುದು ಅಭಿಮಾನಿಗಳ ಒತ್ತಾಯ. ಆಯ್ಕೆ ಸಮಿತಿ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS: ಟಿ20 ಯಲ್ಲೂ ಆಸ್ಟ್ರೇಲಿಯಾ ಕೈಲಿ ಹೊಡೆಸಿಕೊಂಡ ಟೀಂ ಇಂಡಿಯಾ

ಅಭಿಷೇಕ್‌ ಶರ್ಮಾ ಬ್ಯಾಗ್‌ ನೋಡಿ ಹರ್ಷದೀಪ್‌, ಶುಭ್ಮನ್ ಗಿಲ್ ಹೀಗೇ ಕಾಲೆಳೆಯುವುದಾ

ಹುಡುಗರ ಹೃದಯ ಗೆದ್ದ ಸ್ಮೃತಿ ಮಂಧಾನಗೆ ಮದುವೆ ಫಿಕ್ಸ್‌, ಎಲ್ಲಿ, ಯಾವಾಗ ಇಲ್ಲಿದೆ ಮಾಹಿತಿ

IND vs AUS: ವಿಕೆಟ್ ಮೇಲೆ ವಿಕೆಟ್ ಬಿದ್ದರೂ ಅಭಿಷೇಕ್ ಶರ್ಮಾಗೆ ಕ್ಯಾರೇ ಇಲ್ಲ

ಮತಾಂತರ ಆರೋಪದಿಂದ ಆತಂಕದ ಖಾಯಿಲೆವರೆಗೆ: ಸೆಮಿಫೈನಲ್ ಸ್ಟಾರ್ ಜೆಮಿಮಾ ರೊಡ್ರಿಗಸ್ ಕತೆ

ಮುಂದಿನ ಸುದ್ದಿ
Show comments