Publish Date: Mon, 01 Jul 2019 (09:38 IST)
Updated Date: Mon, 01 Jul 2019 (09:41 IST)
ಲಂಡನ್: ವಿಕೆಟ್ ಕೀಪರ್ ಧೋನಿ ಡಿಆರ್ ಎಸ್ ನಿಯಮ ತೆಗೆದುಕೊಳ್ಳಬೇಕೋ ಬೇಡವೋ ಎಂದು ಕರಾರುವಾಕ್ ಆಗಿ ನಿರ್ಣಯಿಸುವ ಆಟಗಾರ ಎಂದೇ ಖ್ಯಾತಿ. ಆದರೆ ಧೋನಿ ಕೂಡಾ ಕೆಲವೊಮ್ಮೆ ತಪ್ಪು ಮಾಡುತ್ತಾರೆ.
ನಿನ್ನೆ ಇಂಗ್ಲೆಂಡ್ ವಿರುದ್ಧ ಧೋನಿ ಮಾಡಿದ ಇಂತಹದ್ದೇ ಒಂದು ತಪ್ಪಿಗಾಗಿ ಅಭಿಮಾನಿಗಳು ಟ್ವಿಟರ್ ನಲ್ಲಿ ಅವರ ವಿರುದ್ಧ ಸಿಟ್ಟು ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್ ಆರಂಭಿಕ ಜೇಸನ್ ರಾಯ್ ವಿರುದ್ಧ ಡಿಆರ್ ಎಸ್ ತೆಗೆದುಕೊಳ್ಳದೇ ಇರುವಂತೆ ಧೋನಿ ಸಲಹೆ ನೀಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜೇಸನ್ ರಾಯ್ ಬೌಲಿಂಗ್ ನಲ್ಲಿ ಧೋನಿ ವಿಕೆಟ್ ಹಿಂದುಗಡೆ ಕ್ಯಾಚ್ ಪಡೆದಿದ್ದರು. ಆದರೆ ಅಂಪಾಯರ್ ಇದನ್ನು ಪುರಸ್ಕರಿಸಲಿಲ್ಲ. ಆದರೆ ರಿವ್ಯೂ ನೋಡಿದಾಗ ಬಾಲ್ ರಾಯ್ ಗ್ಲೌಸ್ ಗೆ ತಗುಲಿದ್ದು ಸ್ಪಷ್ಟವಾಗಿತ್ತು.
ಕೊಹ್ಲಿ ಧೋನಿ ಮಾತು ಕೇಳಬಾರದಿತ್ತು. ಅಷ್ಟೇ ಅಲ್ಲ, ಕೆಲವರು ಧೋನಿಯನ್ನು ಎಲ್ಲರೂ ಅತಿಯಾಗಿ ತಲೆ ಮೇಲೆ ಕೂರಿಸುತ್ತಿರುವುದು ಯಾಕೆ? ಅವರೇನು ದೇವರಾ? ಎಂದೆಲ್ಲಾ ಸಿಟ್ಟು ಹೊರ ಹಾಕಿದ್ದಾರೆ.