ಫಾರ್ಮ್ ನಲ್ಲಿಲ್ಲಾಂದ್ರೂ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ ಹಾಗೆ ಬಾಬರ್ ಅಜಮ್ ರನ್ನು ಬೆಂಬಲಿಸಬೇಕು

Krishnaveni K
ಮಂಗಳವಾರ, 15 ಅಕ್ಟೋಬರ್ 2024 (10:26 IST)
ಇಸ್ಲಾಮಾಬಾದ್: ಫಾರ್ಮ್ ನಲ್ಲಿಲ್ಲ ಅಂದ್ರೂ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲ್ವಾ? ಹಾಗೇ ಬಾಬರ್ ಅಜಮ್ ರನ್ನೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲಿಸಬೇಕು.. ಹೀಗಂತ ಪಾಕ್ ಕ್ರಿಕೆಟಿಗ ಫಕರ್ ಜಮಾನ್ ನೀಡಿರುವ ಹೇಳಿಕೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.

ಆರಂಭದಿಂದಲೂ ಪಾಕಿಸ್ತಾನಿಯರು ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಸುತ್ತಲೇ ಬಂದಿದ್ದಾರೆ. ಅಸಲಿಗೆ ಕೊಹ್ಲಿ ಮಾಡಿದ ಸಾಧನೆಯ ಶಿಖರವನ್ನು ತಲುಪುವುದೂ ಬಾಬರ್ ಗೆ ಸುಲಭವಲ್ಲ. ಹಾಗಿದ್ದರೂ ಈಗಲೂ ಬಾಬರ್ ರನ್ನು ಕೊಹ್ಲಿಗೆ ಹೋಲಿಸುವುದು ಮಾತ್ರ ಬಿಟ್ಟಿಲ್ಲ.

ಇದು ಎಷ್ಟರಮಟ್ಟಿಗೆ ಎಂದರೆ ಈಗ ಫಾರ್ಮ್ ಕಳೆದುಕೊಂಡಿರುವ ವಿಚಾರದಲ್ಲೂ ಕೊಹ್ಲಿಗೆ ಬಾಬರ್ ರನ್ನು ಕಂಪೇರ್ ಮಾಡಲಾಗುತ್ತಿದೆ. ಕಳಪೆ ಫಾರ್ಮ್ ಹಿನ್ನಲೆಯಲ್ಲಿ ಇಂಗ್ಲೆಂಡ್  ವಿರುದ್ಧದ ಟೆಸ್ಟ್ ಪಂದ್ಯದಿಂದ ಬಾಬರ್ ಅಜಮ್, ನಸೀಂ ಶಾ ಮತ್ತು ಶಾಹಿನ್ ಶಾರನ್ನು ಹೊರಗಿಡಲಾಗಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಫಕರ್ ಜಮಾನ್, ವಿರಾಟ್ ಕೊಹ್ಲಿಯನ್ನು ಬೆಂಬಲಿಸುವಂತೆ ಬಾಬರ್ ಅಜಮ್ ರನ್ನೂ ಕೈ ಬಿಡದೇ ಬೆಂಬಲಿಸಬೇಕು. ಬಾಬರ್ ಅತ್ಯುತ್ತಮ ಬ್ಯಾಟಿಗ. ಅವರನ್ನು ಹೊರಿಗಿಟ್ಟರೆ ನಿಮ್ಮ ಅತ್ಯುತ್ತಮ ಆಟಗಾರನನ್ನು ಹೊರಗಿಟ್ಟಂತೆ. 2020-23 ರವರೆಗೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ದರೂ ಅವರನ್ನು ತಂಡದಿಂದ ಕೈ ಬಿಟ್ಟಿರಲಿಲ್ಲ. ಹಾಗೆಯೇ ಬಾಬರ್ ರನ್ನೂ ಬಿಡಬಾರದು’ ಎಂದಿದ್ದರು. ಆದರೆ ಅವರ ಹೇಳಿಕೆ ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು, ನೆಟ್ಟಿಗರು ಕೊಹ್ಲಿಗೆ ಜೊತೆ ಬಾಬರ್ ಕಂಪೇರ್ ಮಾಡಿರುವುದನ್ನು ಟ್ರೋಲ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಸೂರ್ಯಕುಮಾರ್‌ ಹೆಗಲಿಗೆ ಟಿ20 ನಾಯಕತ್ವ ಜವಾಬ್ದಾರಿ, ಕಾಪು ಮಾರಿಗುಡಿಗೆ ಪತ್ನಿ ಭೇಟಿ

ಒಂದೇ ಬೆಡ್, ನಾಲ್ವರು ಫ್ರೆಂಡ್ಸ್.. ಬಾಯ್ಸ್ ಮೀರಿಸಿದ ಭಾರತ ಮಹಿಳಾ ಕ್ರಿಕೆಟಿಗರ ಸೆಲೆಬ್ರೇಷನ್

ಜೀಸಸ್ ಈವತ್ತು ರಜಾ ಇದ್ದ ಅನ್ಸುತ್ತೆ.. ಜೆಮಿಮಾ ರೊಡ್ರಿಗಸ್ ರನ್ನು ಹೀಗಾ ಟ್ರೋಲ್ ಮಾಡೋದು

ಗೌತಮ್ ಗಂಭೀರ್ ಗೆ ಸಾಕಾ ಇನ್ನೂ ಬೇಕಾ.. ನೆಟ್ಟಿಗರಿಂದ ತಪರಾಕಿ

ಮುಂದಿನ ಸುದ್ದಿ
Show comments