Publish Date: Sat, 05 Sep 2026 (14:26 IST)
Updated Date: Sat, 05 Sep 2026 (14:28 IST)
ಮುಂಬೈ: ಭಾರತದ ಯುವ ಕ್ರಿಕೆಟಿಗ, ಅಂಡರ್-19 ತಂಡದ ಸ್ಪಿನ್ನರ್ ರೋಹಿತ್ ಯಾದವ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
ವಯಸ್ಸಿನ ವಂಚನೆ ಮತ್ತು ನಕಲಿ ಜನನ ಪ್ರಮಾಣ ಪತ್ರ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸವಿರುವುದು ಸಾಬೀತಾಗಿರುವುದು. ದೇಶಿ ಕ್ರಿಕೆಟ್‌ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುವ ರೋಹಿತ್ ಯಾದವ್ ತಮ್ಮ ವಯಸ್ಸಿನಲ್ಲಿ ಸುಮಾರು 27 ತಿಂಗಳುಗಳನ್ನು ಕಡಿಮೆ ತೋರಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ರೋಹಿತ್ ಯಾದವ್ ಇತ್ತೀಚೆಷ್ಟೇ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತದ ಅಂಡರ್-19 ತಂಡದಲ್ಲೂ ಆಡಿದ್ದರು ಮತ್ತು ರಾಜಕೋಟ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆಯಾಗಿದ್ದರು. ಆದರೆ ಈ ಅಕ್ರಮ ಹೊರಬಂದ ತಕ್ಷಣವೇ ಬಿಸಿಸಿಐ ಅವರನ್ನು ತಂಡದಿಂದ ಕೈಬಿಟ್ಟು, ನಿಷೇಧಿಸಿದೆ.
ಬಂಗಾಳ ಕ್ರಿಕೆಟ್ ಸಂಘ ನಡೆಸಿದ ಕಟ್ಟುನಿಟ್ಟಿನ ದಾಖಲೆಗಳ ಪರಿಶೀಲನೆಯ ವೇಳೆ ರೋಹಿತ್ ಯಾದವ್ ಸೇರಿದಂತೆ ಒಟ್ಟು 64ಕ್ಕೂ ಹೆಚ್ಚು ಆಟಗಾರರ ವಯಸ್ಸಿನಲ್ಲಿ ವ್ಯತ್ಯಾಸವಿರುವುದು ಪತ್ತೆಯಾಗಿದ್ದು, ಇವರ ಮೇಲೂ ಬಿಸಿಸಿಐ ಹಾಗೂ ರಾಜ್ಯ ಸಂಘದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ವಯಸ್ಸಿನ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇಂತಹ ಕೃತ್ಯಗಳಲ್ಲಿ ತೊಡಗುವ ಆಟಗಾರರ ವಿರುದ್ಧ ಕಠಿಣ ಮುಂದುವರಿಸುವುದಾಗಿ ಎಚ್ಚರಿಸಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ