Select Your Language

Notifications

webdunia
webdunia
webdunia
webdunia

ಪಾಕ್ ವಿರುದ್ಧ 3ನೇ ಟೆಸ್ಟ್: ಇಂಗ್ಲೆಂಡ್‌ 3 ವಿಕೆಟ್‌ಗೆ 107 ರನ್

england
ಎಡ್ಗ್‌ಬಾಸ್ಟನ್: , ಬುಧವಾರ, 3 ಆಗಸ್ಟ್ 2016 (18:23 IST)
ಇಂಗ್ಲೆಂಡ್ ಮತ್ತು ಪಾಕಿಸ್ತಾನದ ನಡುವೆ ಬರ್ಮಿಂಗ್‌ಹ್ಯಾಮ್ ಎಡ್ಗ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಕಳೆದ ಟೆಸ್ಟ್ ಪಂದ್ಯದಲ್ಲಿ ರೂಟ್ ಮತ್ತು ಕುಕ್ ಅವರ ಉತ್ತಮ ಜತೆಯಾಟದಿಂದ ಇಂಗ್ಲೆಂಡ್ ಬೃಹತ್ ಸ್ಕೋರನ್ನು ದಾಖಲಿಸಿತ್ತು. ಈ ಬಾರಿ  ರೂಟ್ ಮತ್ತು ಕುಕ್ ಇಬ್ಬರನ್ನು ಪಾಕ್ ಬೌಲರುಗಳು ಔಟ್ ಮಾಡಿದ್ದು, ಇಂಗ್ಲೆಂಡ್ ಮುಂದೆ ಹೇಗೆ ಆಡಲಿದೆ ಎನ್ನುವುದೇ ಕುತೂಹಲ ಕೆರಳಿಸಿದೆ.

ರೂಟ್ ಮತ್ತು ಕುಕ್ ಅವರು ಇಂಗ್ಲೆಂಡ್ ಆಧಾರಸ್ತಂಭಗಳಾಗಿದ್ದು ಅವರನ್ನು ಬೇಗನೇ ಔಟ್ ಮಾಡಲು ಪಾಕ್ ಬೌಲರುಗಳು ಯತ್ನಿಸಬೇಕು ಎಂದು ನಾಯಕ ಮಿಸ್ಬಾ ಉಲ್ ಹಕ್ ಹೇಳಿದ್ದರು. ಅವರಿಬ್ಬರನ್ನು ಔಟ್ ಮಾಡಿದರೆ ನಮ್ಮ ಮುಂದಿನ ದಾರಿ ಸುಗಮವಾಗುತ್ತದೆಂದು ಹೇಳಿದ್ದರು.

 ಜೋಯ್ ರೂಟ್ ಸೊಹೇಲ್ ಖಾನ್ ಬೌಲಿಂಗ್‌ನಲ್ಲಿ ಹಫೀಜ್‌ಗೆ ಕ್ಯಾಚಿತ್ತು ಔಟಾದರು ಮತ್ತು ಅಲಸ್ಟೈರ್ ಕುಕ್ ಅವರು ರಾಹತ್ ಅಲಿಗೆ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಕುಕ್ ಅವರು 52 ಎಸೆತಗಳಲ್ಲಿ 45 ರನ್ ಸ್ಕೋರ್ ಮಾಡಿದ್ದು, ಅವರ ಸ್ಕೋರಿನಲ್ಲಿ 8 ಬೌಂಡರಿಗಳಿವೆ. ರೂಟ್ ಕೇವಲ 3 ರನ್‌ಗೆ ಔಟಾದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮರಣೀಯ ಕ್ಷಣ: ರಾಹುಲ್ ಜತೆಗಿದ್ದ 10 ವರ್ಷಗಳ ಹಳೆಯ ಫೋಟೊ ಶೇರ್ ಮಾಡಿದ ಕೊಹ್ಲಿ