ಕಣ್ಣು ಕುಕ್ಕಿದ ಇಂಗ್ಲೆಂಡ್ ಪ್ರೇಕ್ಷಕನ ಕೆಂಪು ಟೀ ಶರ್ಟ್‌, ಕ್ರೀಸ್‌ನಲ್ಲಿದ್ದ ಜಡೇಜಾ ಮಾಡಿದ್ದೇನು ಗೊತ್ತಾ

Sampriya
ಭಾನುವಾರ, 3 ಆಗಸ್ಟ್ 2025 (15:33 IST)
Photo Credit X
ಶನಿವಾರ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ನ 3 ನೇ ದಿನದ ಅಂತಿಮ ಸೆಷನ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ಧ ರವೀಂದ್ರ ಜಡೇಜಾ ಅವರು ಸ್ಟೇಡಿಯಂನಲ್ಲಿ ಕೂತಿದ್ದ ವ್ಯಕ್ತಿಯ ಕೆಂಪು ಬಣ್ಣದ ಟೀ ಶರ್ಟ್‌ ಏಕಾಗ್ರತೆಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಅವರಿಗೆ ಬೇರೆ ಟೀ ಶರ್ಟ್ ನೀಡಿದ ಘಟನೆ ನಡೆಯಿತು. ಈ ಸಂಬಂಧ ಕೆಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. 

ಜಡೇಜಾ ಕೋರಿಕೆ ಬೆನ್ನಲ್ಲೇ ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದ ವೀಕ್ಷಕನಿಗೆ ಬೂದು ಬಣ್ಣದ ಟೀ ಶರ್ಟ್ ಅನ್ನು ನೀಡಲಾಯಿತು.  

ದಿನದ ಅಂತಿಮ ಹಂತದಲ್ಲಿ ಈ ಘಟನೆ ನಡೆದಿದೆ.  ವ್ಯಕ್ತಿ ಕೆಂಪು ಟೀ ಶರ್ಟ್ ಧರಿಸಿ ಪಂದ್ಯಾಟವನ್ನು ನೋಡುತ್ತಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಜಡೇಜಾಗೆ ಕೆಂಪು ಬಣ್ಣದ ಟೀ ಶರ್ಟ್‌ ಏಕಾಗ್ರತೆಯನ್ನು ಹಾಳು ಮಾಡುತ್ತಿದೆ ಎಂದು ಅಂಪೈರ್ ಬಳಿ ಹೇಳಿಕೊಂಡಿದ್ದಾರೆ. 

ಕೂಡಲೇ ಅವರಿಗೆ ಬೂದು ಬಣ್ಣದ ಟೀ ಶರ್ಟ್‌ ಅನ್ನು ನೀಡಲಾಯಿತು. ಶರ್ಟ್ ಬದಲಾಯಿಸಿದ್ದಕ್ಕೆ ಕ್ರಿಸ್‌ನಲ್ಲಿದ್ದ ಜಡೇಜಾ ಆ ವ್ಯಕ್ತಿಯನ್ನು ನೋಡಿ ಥಂಬ್ಸ್ ಅಪ್ ನೀಡಿದರು ಮತ್ತು ನಂತರ ಜೇಮಿ ಓವರ್ಟನ್ ಅವರ ಬೌನ್ಸರ್ ಅನ್ನು ಬೌಂಡರಿಗೆ ಹೊಡೆದರು.

ಜಡೇಜಾ ಇಂಗ್ಲೆಂಡ್ ಬೌಲರ್‌ಗಳಿಗೆ ದೊಡ್ಡ ಕಂಟಕವಾಗಿ ಮುಂದುವರೆದರು ಮತ್ತು ಸರಣಿಯಲ್ಲಿ 500 ರನ್‌ಗಳ ಗಡಿ ದಾಟಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments