Select Your Language

Notifications

webdunia
webdunia
webdunia
webdunia

ಅತ್ತ ವಿರಾಟ್ ಕೊಹ್ಲಿಗೂ ಸೋಲು, ಇತ್ತ ಧೋನಿಗೂ ಸೋಲು

ಅತ್ತ ವಿರಾಟ್ ಕೊಹ್ಲಿಗೂ ಸೋಲು, ಇತ್ತ ಧೋನಿಗೂ ಸೋಲು
NewDelhi , ಭಾನುವಾರ, 26 ಫೆಬ್ರವರಿ 2017 (08:42 IST)
ನವದೆಹಲಿ: ಟೀಂ ಇಂಡಿಯಾದ ಇಬ್ಬರು ಅತ್ಯಂತ ಶ್ರೇಷ್ಠ ನಾಯಕರಿಗೂ ನಿನ್ನೆ ಕರಾಳ ದಿನ. ವಿರಾಟ್ ಕೊಹ್ಲಿ ತಮ್ಮ ತಂಡದ ಜತೆಗೆ ಮೂರೇ ಗಂಟೆಯಲ್ಲಿ ಗಂಟು ಮೂಟೆ ಕಟ್ಟಿದ್ದರೆ, ಅತ್ತ ಧೋನಿಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೋಲೇ ಗತಿಯಾಗಿದೆ.


ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಟೆಸ್ಟ್ ನಲ್ಲಿ ಹೀನಾಯ ಸೋಲನುಭವಿಸಿದೆ. ಟೀಂ ಇಂಡಿಯಾ ಜಾರಿ ಬೀಳುವುದನ್ನೇ ಕಾಯುತ್ತಿದ್ದವರಿಗೆಲ್ಲಾ ಹಬ್ಬದೂಟವೇ ಸಿಕ್ಕಂತಾಗಿದೆ. ಅತ್ತ ಕೊಹ್ಲಿಗಿಂತ ಮೊದಲು ಟೀಂ ಇಂಡಿಯಾ ನಾಯಕರಾಗಿದ್ದ ಧೋನಿ ಕೂಡಾ ಕೂದಲೆಳೆಯ ಅಂತರದಲ್ಲಿ ಕರ್ನಾಟಕದ ವಿರುದ್ಧ ಸೋತಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಕರ್ನಾಟಕ ಗೆಲುವಿಗೆ 267 ರನ್ ಗಳ ಗುರಿ ನಿಗದಿಪಡಿಸಿತ್ತು. ಇದನ್ನು ಬೆಂಬತ್ತಿದ್ದ ಧೋನಿ ನೇತೃತ್ವದ ಜಾರ್ಖಂಡ್ ತಂಡ ಕೇವಲ 262 ರನ್ ಗಳಿಸಲಷ್ಟೇ ಶಕ್ತವಾಯಿತು. ಧೋನಿ 50 ಎಸೆತಗಳಲ್ಲಿ 43 ರನ್ ಗಳಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೀಫೆ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ: ಪುಣೆ ಟೆಸ್ಟ್`ನಲ್ಲಿ 333 ರನ್`ಗಳ ಹೀನಾಯ ಸೋಲು