ಧೋನಿ ಬ್ಯಾಟ್ ನಲ್ಲಿ ಗೆಳೆಯನ ಶಾಪ್ ಹೆಸರು! ನೆಟ್ಟಿಗರು ಫಿದಾ

Krishnaveni K
ಗುರುವಾರ, 8 ಫೆಬ್ರವರಿ 2024 (14:09 IST)
Photo Courtesy: Twitter
ರಾಂಚಿ: ಧೋನಿ ಇಂದು ಕ್ರಿಕೆಟ್ ಜಗತ್ತಿನಲ್ಲಿ ಎಷ್ಟೇ ಹೆಸರು ಮಾಡಿರಬಹುದು. ಆದರೆ ತಾವು ಬೆಳೆದು ಬಂದ ಹಾದಿಯನ್ನು ಮಾತ್ರ ಮರೆತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
 

ಇತ್ತೀಚೆಗೆ ಐಪಿಎಲ್ 2024 ಕ್ಕಾಗಿ ಧೋನಿ ರಾಂಚಿಯಲ್ಲಿ ಅಭ್ಯಾಸ ನಡಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಧೋನಿ ಬ್ಯಾಟ್ ನಲ್ಲಿದ್ದ ಸ್ಟಿಕ್ಕರ್ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಕ್ರಿಕೆಟಿಗರು ತಾವು ಒಪ್ಪಂದ ಮಾಡಿಕೊಂಡಿರುವ ಪ್ರತಿಷ್ಠಿತ ಕಂಪನಿಯ ಸ್ಟಿಕ್ಕರ್ ನ್ನು ಬ್ಯಾಟ್ ಮೇಲೆ ಬಳಸುತ್ತಾರೆ. ಆದರೆ ಧೋನಿ ಬಳಸಿದ್ದು ತಮ್ಮ ಗೆಳೆಯನ ಶಾಪ್ ನ ಹೆಸರಿನ ಸ್ಟಿಕ್ಕರ್.

ಧೋನಿ ಬ್ಯಾಟ್ ನಲ್ಲಿತ್ತು ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್
ಧೋನಿ ತಮ್ಮ ಬ್ಯಾಟ್ ನಲ್ಲಿ ಗೆಳೆಯ ಪರಮ್ ಜಿತ್ ನ ಕ್ರೀಡಾಪರಿಕರಗಳ ಶಾಪ್ ಪ್ರೈಮ್ ಸ್ಪೋರ್ಟ್ಸ್ ಹೆಸರಿನ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು. ಪರಮ್ ಜಿತ್ ಸಿಂಗ್ ಬಗ್ಗೆ ಧೋನಿ ಬಯೋಪಿಕ್ ಸಿನಿಮಾದಲ್ಲೂ ಉಲ್ಲೇಖವಿದೆ. ಧೋನಿಯ ಬ್ಯಾಟ್ ಗೆ ಮೊದಲು ಸ್ಪಾನ್ಸರ್ ಮಾಡಿದವರು ಇವರೇ. ಬಾಲ್ಯದಿಂದಲೂ ಧೋನಿಗೆ ಬೆಂಬಲವಾಗಿ ನಿಂತವರು ಪರಮ್ ಜಿತ್. ಧೋನಿ ವೃತ್ತಿ ಜೀವನ ಈ ಮಟ್ಟಕ್ಕೇರಲು ಪರಮ್ ಜಿತ್ ಕೊಡುಗೆ ಅಪಾರವಾಗಿದೆ.

ಈಗ ಧೋನಿಗೆ ಯಶಸ್ಸು ಸಿಕ್ಕಿದೆ. ಹಾಗಂತ ತನ್ನ ವೃತ್ತಿ ಜೀವನ ಬೆಳೆಯಲು ಕಾರಣವಾದ ಗೆಳೆಯನನ್ನು ಮಾತ್ರ ಧೋನಿ ಮರೆತಿಲ್ಲ. ಆತನ ಶಾಪ್ ಹೆಸರನ್ನು ಬ್ಯಾಟ್ ನ ಸ್ಟಿಕ್ಕರ್ ಮಾಡಿಕೊಂಡು ಗೆಳೆಯನ ವೃತ್ತಿಗೆ ಬೆಂಬಲ ನೀಡಿದ್ದಾರೆ. ಪರಮ್ ಜಿತ್ ಸ್ಪೋರ್ಟ್ಸ್ ಶಾಪ್ ರಾಂಚಿಯಲ್ಲಿದೆ. ಧೋನಿಗೆ ಮೊದಲ ಬ್ಯಾಟ್ ಸ್ಪಾನ್ಸರ್ ಮಾಡಿದ್ದು ಪರಮ್ ಜಿತ್. ಅದಕ್ಕೇ ಗೆಳೆಯನಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿದ್ದಾರೆ ಧೋನಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments