Publish Date: Wed, 24 May 2023 (08:40 IST)
Updated Date: Wed, 24 May 2023 (09:10 IST)
ಚೆನ್ನೈ: ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್ ನಿಂದ ನಿವೃತ್ತಿಗೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಈ ಬಗ್ಗೆ ಇದೀಗ ಅವರೇ ದೃಢವಾದ ಹೇಳಿಕೆ ನೀಡಿದ್ದಾರೆ.
ಪ್ಲೇ ಆಫ್ ಪಂದ್ಯದಲ್ಲಿ ಗೆಲುವಿನ ಬಳಿಕ ಮಾತನಾಡಿದ ಸಿಎಸ್ ಕೆ ಕ್ಯಾಪ್ಟನ್ ಧೋನಿ, ನನಗೆ ಇನ್ನೂ ಗೊತ್ತಿಲ್ಲ. ಡಿಸೆಂಬರ್ ನಲ್ಲಿ ಹರಾಜು ಪ್ರಕ್ರಿಯೆ ಇರಬಹುದು. ನನಗೆ ನಿವೃತ್ತಿ ಬಗ್ಗೆ ನಿರ್ಧಾರ ತೆಗೆದುಕೊಳ‍್ಳಲು ಇನ್ನೂ ಏಳರಿಂದ ಎಂಟು ತಿಂಗಳ ಅವಕಾಶವಿದೆ. ಹೀಗಾಗಿ ನನಗೆ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯವಿದೆ ಎಂದಿದ್ದಾರೆ.
ಇನ್ನು, ತಮ್ಮ ನಾಯಕತ್ವದ ಬಗ್ಗೆ ಮಾತನಾಡಿರುವ ಧೋನಿ, ನಾನು ಕಿರಿ ಕಿರಿ ಮಾಡುವ ಕ್ಯಾಪ್ಟನ್. ಫೀಲ್ಡಿಂಗ್ ಮಾಡುವಾಗ ನಾನು ಫೀಲ್ಡರ್ ಗಳನ್ನು ಒಂದೆರಡು ಅಡಿ ಆಚೆ ಈಚೆ ಮಾಡುತ್ತಲೇ ಇರುತ್ತೇನೆ. ನಾನು ನನ್ನ ಮನಸ್ಸಿನ ಮಾತು ಕೇಳುತ್ತೇನೆ. ವಿಕೆಟ್, ಲೈನ್ ಗಮನಿಸಿ ನನ್ನ ಅಂದಾಜು ಮೇರೆಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದು ಹೆಚ್ಚಾಗಿ ಫಲ ಕೊಡುತ್ತದೆ. ಯಾವಾಗಲೂ ನನ್ನ ಮೇಲೆ ಒಂದು ಕಣ‍್ಣಿಟ್ಟಿರಿ. ಕ್ಯಾಚ್ ಡ್ರಾಪ್ ಆದರೂ ನನ್ನಿಂದ ಪ್ರತಿಕ್ರಿಯೆ ಇರಲ್ಲ. ಒಂದು ಕಣ್ಣಿಡಿ ಸಾಕು ಅಂತೀನಿ ಎಂದಿದ್ದಾರೆ ಧೋನಿ.