ಪಿಚ್ ಗೆ ನುಗ್ಗಿದ್ದ ಅಭಿಮಾನಿಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಧೋನಿ

Krishnaveni K
ಶುಕ್ರವಾರ, 31 ಮೇ 2024 (16:16 IST)
ರಾಂಚಿ: ಐಪಿಎಲ್ 2024 ರ ಗುಜರಾತ್ ಟೈಟನ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಧೋನಿಯನ್ನು ನೋಡಲು ಅಭಿಮಾನಿಯೊಬ್ಬ ಮೈದಾನಕ್ಕೇ ನುಗ್ಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನೆನಪಿರಬಹುದು. ಈ ಪಿಚ್ ಇನ್ ವೇಡರ್ ಈಗ ಧೋನಿ ತನಗೆ ಮಾಡಿದ ಪ್ರಾಮಿಸ್ ಬಗ್ಗೆ ಹೇಳಿಕೊಂಡಿದ್ದಾರೆ.

ಧೋನಿ ಬ್ಯಾಟಿಂಗ್ ಮಾಡುತ್ತಿದ್ದ ಏಕಾಏಕಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿ ಅವರನ್ನು ಹಿಡಿಯಲು ಯತ್ನಿಸಿದ್ದಲ್ಲದೆ, ಕೊನೆಗೆ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದ. ಆತನನ್ನು ಧೋನಿ ಹೆಗಲಿಗೆ ಕೈ ಹಾಕಿ ಏನೋ ಮಾತನಾಡಿದ್ದರು. ಇದೀಗ ಆ ಮಾತುಕತೆಯನ್ನು ಆ ಅಭಿಮಾನಿ ಬಹಿರಂಗಪಡಿಸಿದ್ದಾನೆ.

ಅಂದು ನಾನು ಮೈದಾನಕ್ಕೆ ನುಗ್ಗಿ ಧೋನಿಯನ್ನು ಹಿಡಿಯಲು ಯತ್ನಿಸಿದಾಗ ಅವರು ಓಡಿದರು. ನಾನು ಸ್ವಲ್ಪ ಆಟವಾಡಿಸುತ್ತೇನೆ ಎಂದು ಮೊದಲು ತಪ್ಪಿಸಿಕೊಳ್ಳಲು ನೋಡಿದರು. ಬಳಿಕ ಖುಷಿ ತಡೆಯಲಾಗದೇ ನಾನು ಅವರ ಕಾಲಿಗೆ ಬಿದ್ದೆ. ನನ್ನ ಕಣ್ಣಲ್ಲಿ ನೀರಿತ್ತು. ಧೋನಿ ಭಾಯಿ ನನ್ನನ್ನು ಎತ್ತಿ ಹಿಡಿದು ಯಾಕೆ ಏದುಸಿರು ಬಿಡುತ್ತಿದ್ದೀಯಾ ಎಂದು ಕೇಳಿದರು.
ಆಗ ನಾನು ನನಗಿರುವ ಉಸಿರಾಟದ ಸಮಸ್ಯೆ ಬಗ್ಗೆ ಮತ್ತು ಶಸ್ತ್ರಚಿಕಿತ್ಸೆ ಮಾಡಿಸಬೇಕಿರುವ ಬಗ್ಗೆ ಹೇಳಿದೆ. ಧೋನಿ ಭಾಯಿ ನಿಂಗೆ ಏನೂ ಆಗಲ್ಲ. ನಿನಗೆ ಏನೂ ಆಗಲು ನಾನು ಬಿಡಲ್ಲ. ಈ ಭದ್ರತಾ ಸಿಬ್ಬಂದಿಯೂ ನಿನಗೆ ಏನೂ ಮಾಡಲ್ಲ. ನಿನಗೆ ಶಸ್ತ್ರಚಿಕಿತ್ಸೆಗೆ ನಾನು ಸಹಾಯ ಮಾಡುತ್ತೇನೆ ಎಂದು ಪ್ರಾಮಿಸ್ ಮಾಡಿದರು. ಅದಕ್ಕೇ ಅವರನ್ನು ಎಲ್ಲರೂ ದೇವರ ಹಾಗೆ ಕಾಣುವುದು’ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ICC Men's Test Player Rankings: ನಂಬರ್ ಒನ್ ಸ್ಥಾನ ಕಾಯ್ದುಕೊಂಡ ಜಸ್ಪ್ರೀತ್ ಬುಮ್ರಾ

Viral video: ಔಟಾದ ಸಿಟ್ಟಿನಲ್ಲಿ ಬೌಲರ್ ಗೆ ಬ್ಯಾಟ್ ನಿಂದ ಹೊಡೆಯಲು ಹೋದ ಪೃಥ್ವಿ ಶಾ

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

ಮುಂದಿನ ಸುದ್ದಿ
Show comments