ಹರಿಣಗಳ ವಿರುದ್ಧ ಸರಣಿಗೆ ಭಾರತ ತಂಡದಲ್ಲಿ ಶ್ರೇಯಾಂಕ: ಡಬ್ಲ್ಯುಪಿಎಲ್‌ನಲ್ಲಿ ಮಿಂಚಿದ್ದ ಕನ್ನಡತಿ

sampriya
ಶುಕ್ರವಾರ, 31 ಮೇ 2024 (15:52 IST)
Photo By X
ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 13 ವಿಕೆಟ್‌ ಪಡೆದು ಮಿಂಚಿದ ಕರ್ನಾಟಕದ ಕುವರಿ, ಬಲಗೈ ಆಟಗಾರ್ತಿ ಶ್ರೇಯಾಂಕ ಪಾಟೀಲ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಜೂನ್‌ ಮತ್ತು ಜುಲೈನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಮೂರು ಮಾದರಿಯ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ದಕ್ಷಿಣ ಆಫ್ರಿಕಾ ವನಿತಾ ತಂಡವು ಭಾರತದಲ್ಲಿ ಒಂದು ಟೆಸ್ಟ್, ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಡಲಿದೆ.

ಹರ್ಮನ್ ಪ್ರೀತ್ ಕೌರ್ ನಾಯಕತ್ವದಡಿಯಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸ್ಮೃತಿ ಮಂದನಾ ಅವರು ಉಪ ನಾಯಕಿಯಾಗಿರಲಿದ್ದಾರೆ. ಜೂನ್ 16ರಂದು ಏಕದಿನ ಸರಣಿಯೊಂದಿಗೆ ಕೂಟ ಆರಂಭವಾಗಲಿದೆ. ಜೂನ್ 28ರಂದು ಟೆಸ್ಟ್ ಪಂದ್ಯ ನಡೆಯಲಿದೆ. ಜುಲೈ 5ರಿಂದ ಟಿ20 ಸರಣಿ ಆರಂಭವಾಗಲಿದೆ.

ಬಾಂಗ್ಲಾ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಆಶಾ ಶೋಭನಾ ಅವರು ಏಕದಿನ ಸರಣಿಗೆ ಮೊದಲ ಬಾರಿಗೆ ಕರೆ ಪಡೆದಿದ್ದಾರೆ. ವರ್ಷದ ಬಳಿಕ ಪ್ರಿಯಾ ಪುನಿಯಾ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಕದಿನ ಪಂದ್ಯಗಳು ನಡೆಯಲಿದ್ದು, ಟೆಸ್ಟ್ ಮತ್ತು ಟಿ20 ಪಂದ್ಯಗಳು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

ಏಕದಿನ ಸರಣಿಗೆ ಭಾರತದ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್‌), ಉಮಾ ಚೆಟ್ರಿ (ವಿಕೆಟ್‌ ಕೀಪರ್‌), ದಯಾಳನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭಾನಾ, ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪುನಿಯಾ.

ಭಾರತದ ಟೆಸ್ಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದನಾ (ಉಪ ನಾಯಕಿ), ಶಫಾಲಿ ವರ್ಮಾ, ಶುಭಾ ಸತೀಶ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್‌), ಉಮಾ ಚೆಟ್ರಿ (ವಿಕೆಟ್‌ ಕೀಪರ್‌), ದೀಪ್ತಿ ಶರ್ಮಾ, ಸ್ನೇಹ ರಾಣಾ, ಸೈಕಾ ಇಶಾಕ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಪ್ರಿಯಾ ಪುನಿಯಾ

ಟಿ20 ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಉಮಾ ಚೆಟ್ರಿ (ವಿಕೆಟ್‌ ಕೀಪರ್‌), ರಿಚಾ ಘೋಷ್ (ವಿಕೆಟ್‌ ಕೀಪರ್‌), ಜೆಮಿಮಾ ರಾಡ್ರಿಗಸ್ *, ಸಜನಾ ಸಜೀವನ್, ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ಅಮಂಜೋತ್ ಕೌರ್, ಆಶಾ ಸೋಭಾನ, ಪೂಜಾ ವಸ್ತ್ರಾಕರ್ *, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI Test: ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್‌ ದಿಟ್ಟ ಹೋರಾಟ: ರೋಚಕ ಘಟ್ಟದತ್ತ ಎರಡನೇ ಟೆಸ್ಟ್‌

IND vs WI Test: ಕುಲದೀಪ್‌ ಕೈಚಳಕಕ್ಕೆ ಕುಸಿದ ವಿಂಡೀಸ್‌: ಫಾಲೋಆನ್‌ ಹೇರಿದ ಭಾರತ

IND vs WI: ಸಾಯಿ ಸುದರ್ಶನ್ ಗೆ ಬಾಲ್ ತಾನಾಗಿಯೇ ಕೈಯೊಳಗೆ ಬಂದು ಕೂತಿದ್ದು ಹೀಗೆ: video

Video: ಜೈಸ್ವಾಲ್ ದ್ವಿಶತಕ ತಪ್ಪಲು ಶುಭಮನ್ ಗಿಲ್ ಮೋಸ ಕಾರಣ: ಕೊಹ್ಲಿ ನೋಡಿ ಕಲಿಯಿರಿ ಎಂದ ನೆಟ್ಟಿಗರು

ರೋಹಿತ್ ಶರ್ಮಾರನ್ನು ನೋಡಿ ಅತ್ತೇ ಬಿಟ್ಟ ಬಾಲಕ: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments