Publish Date: Mon, 15 Apr 2019 (08:42 IST)
Updated Date: Mon, 15 Apr 2019 (12:48 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಆಡುವ ತಂಡದಲ್ಲಿ ಇದೀಗ ಗಾಯದ್ದೇ ಚಿಂತೆಯಾಗಿದೆ. ಐಪಿಎಲ್ ಆಡುತ್ತಿರುವ ಕ್ರಿಕೆಟಿಗರು ಒಬ್ಬರಾದ ಮೇಲೆ ಒಬ್ಬರಂತೆ ಗಾಯದ ಭೀತಿ ಎದುರಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಆಡುವ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ ಬಳಿಕ ಇದೀಗ ಧೋನಿ ಕೂಡಾ ಗಾಯದ ಭೀತಿಯಲ್ಲಿರುವುದು ಟೀಂ ಇಂಡಿಯಾದಲ್ಲಿ ಆತಂಕ ಮೂಡಿಸಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಧೋನಿ ಬೆನ್ನು ನೋವಿಗೆ ತುತ್ತಾಗಿದ್ದರು. ಹೀಗಾಗಿ ಈ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ಧೋನಿ ಬೆನ್ನು ಸ್ವಲ್ಪ ನೋವಿದೆ. ಆದರೆ ಸುಧಾರಿಸುವ ವಿಶ್ವಾಸವಿದೆ ಎಂದಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ಈ ಆಟಗಾರರ ಫಿಟ್ನೆಸ್ ಪ್ರಮುಖವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ