ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲು ರಾಂಚಿಗೆ ಬಂದಿರುವ ಟೀಂ ಇಂಡಿಯಾದ ತಮ್ಮ ಆಪ್ತರಿಗೆ ಧೋನಿ ತಮ್ಮ ಮನೆಯಲ್ಲಿ ಪಾರ್ಟಿ ನೀಡಿದ್ದಾರೆ. ಆದರೆ ಈ ಪಾರ್ಟಿಗೆ ಎಲ್ಲರಿಗೆ ಆಹ್ವಾನ ನೀಡಿಲ್ಲ.
ರಾಂಚಿ ಧೋನಿಯ ತವರೂರು. ತಮ್ಮ ಊರಿಗೆ ಬಂದ ಟೀಂ ಇಂಡಿಯಾ ಸ್ನೇಹಿತರನ್ನು ಧೋನಿ ಮನೆಗೆ ಊಟಕ್ಕೆ ಕರೆದಿದ್ದಾರೆ. ಈ ಪಾರ್ಟಿಗೆ ಕೇವಲ ಮೂವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಅವರು ಧೋನಿ ಆಪ್ತರು.
ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಋತುರಾಜ್ ಗಾಯಕ್ ವಾಡ್ ಮಾತ್ರ ಧೋನಿ ಮನೆ ಪಾರ್ಟಿಗೆ ಹೋಗಿದ್ದರು. ಈ ಮೂವರೂ ಧೋನಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಕ್ರಿಕೆಟಿಗರು. ಹೀಗಾಗಿ ಇವರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಅದರಲ್ಲೂ ವಿಶೇಷವಾಗಿ ಪಾರ್ಟಿ ಮುಗಿದ ಬಳಿಕ ವಿರಾಟ್ ಕೊಹ್ಲಿಯನ್ನು ತಾವೇ ಖುದ್ದಾಗಿ ತಮ್ಮ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋಟೆಲ್ ರೂಂಗೆ ಧೋನಿ ಬಿಟ್ಟು ಬಂದಿದ್ದಾರೆ. ಇದು ಇಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.