ರವೀಂದ್ರ ಜಡೇಜಾ ಮೇಲೆ ಧೋನಿ ಬಾಸ್ ಗಿರಿಯೇ ಸೋಲಿಗೆ ಕಾರಣವಾ?!

Webdunia
ಮಂಗಳವಾರ, 5 ಏಪ್ರಿಲ್ 2022 (09:00 IST)
ಮುಂಬೈ: ಐಪಿಎಲ್ ನಲ್ಲಿ ಯಾವತ್ತೂ ಪ್ರಬಲ ತಂಡವೆಂದೇ ಪರಿಗಣಿಸಲ್ಪಡುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಆಡಿದ ಮೂರೂ ಪಂದ್ಯಗಳನ್ನು ಸೋತು ನಿರಾಶೆಯಲ್ಲಿದೆ.

ಈ ಐಪಿಎಲ್ ಗೆ ಎರಡು ದಿನ ಬಾಕಿಯಿರುವಾಗ ಧೋನಿ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದರು. ಆದರೆ ಜಡೇಜಾಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಜಡೇಜಾ ನಾಯಕರಾದರೂ ಧೋನಿ ಈಗಲೂ ಸೂಪರ್ ಕ್ಯಾಪ್ಟನ್ ಆಗಿ ತಂಡದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಈ ಬಗ್ಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮಾತನಾಡಿದ್ದು, ಜಡೇಜಾ ಮೇಲೆ ಧೋನಿ ಬಾಸ್ ಗಿರಿಯೇ ಅವರಿಗೆ ಮುಳುವಾಗುತ್ತಿದೆ ಎಂದು ಟೀಕಿಸಿದ್ದಾರೆ.  ಇದಕ್ಕೆ ತಾಜಾ ಉದಾಹರಣೆಯೆಂದರೆ ಲಕ್ನೋ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಶಿವಂ ದುಬೆಗೆ ಅಂತಿಮ ಹಂತದಲ್ಲಿ ಬೌಲಿಂಗ್ ಮಾಡಲು ಹೇಳಿದ್ದು ಧೋನಿ. ಆದರೆ ದುಬೆ ಯರ್ರಾ ಬಿರ್ರಿ ರನ್ ನೀಡಿ ಸಿಎಸ್ ಕೆ ಸೋಲಿಗೆ ಕಾರಣರಾದರು. ಮೈದಾನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಇನ್ನೂ ಜಡೇಜಾಗಿಲ್ಲ. ಈ ಗೊಂದಲಗಳಿಂದಾಗಿಯೇ ಸಿಎಸ್ ಕೆ ಸೋಲುತ್ತಿದೆ ಎನ್ನುವುದು ಜಡೇಜಾ ಮಾತು. ಹಲವರು ಇದೇ ಅಭಿಪ್ರಾಯ ಹೊಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಮೊದಲ ಪಂದ್ಯ ಗೆದ್ದಿರುವ ಭಾರತ ತಂಡದಲ್ಲಿ ಇಂದು ಎರಡು ಬದಲಾವಣೆ

ಭಾರತದಲ್ಲಿ ಆಡಲ್ಲ ಎಂದ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸಿದ ಐಸಿಸಿ

IPL 2026: ಆರ್ ಸಿಬಿ ಬೆಂಗಳೂರಿನಲ್ಲಿ ಆಡಲು ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ

IND vs NZ: ಟೀಂ ಇಂಡಿಯಾ, ನ್ಯೂಜಿಲೆಂಡ್ ಎರಡನೇ ಟಿ20 ಇಂದು, ಎಷ್ಟು ಗಂಟೆಗೆ ಆರಂಭ ನೋಡಿ

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

ಮುಂದಿನ ಸುದ್ದಿ
Show comments