Webdunia - Bharat's app for daily news and videos

Install App

ತವರಿನ ಪ್ರೇಕ್ಷಕರ ಬೆಂಬಲವಿದ್ದರೂ ಆರ್‌ಸಿಬಿ ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಸೋತಿದ್ಯಾಕೆ

Sampriya
ಭಾನುವಾರ, 2 ಮಾರ್ಚ್ 2025 (11:25 IST)
Photo Courtesy X
ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ವಡೋದರ ಲೆಗ್‌ ಮತ್ತು ಬೆಂಗಳೂರು ಲೆಗ್‌ನಲ್ಲಿ ಒಟ್ಟು 14 ಪಂದ್ಯಗಳು ನಡೆದಿವೆ. ಈ ಪೈಕಿ 13 ಪಂದ್ಯಗಳಲ್ಲಿ ಚೇಸಿಂಗ್‌ ತಂಡಗಳೇ ಜಯಭೇರಿ ಬಾರಿಸಿವೆ. ಹಾಗಾದರೆ, ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳಿಗೆ ಸೋಲು ಗ್ಯಾರಂಟಿನಾ....

ಹೀಗೊಂದು ಚರ್ಚೆ ಕ್ರೀಡಾವಲಯದಲ್ಲಿ ಜೋರಾಗಿದೆ. ಪಂದ್ಯದ ಗೆಲುವಿಗೆ ಟಾಸ್‌ ಗೆಲುವೇ ನಿರ್ಣಾಯಕವಾಗುತ್ತಿದೆ. ವಡೋದರ ಲೆಗ್‌ನಲ್ಲಿ ನಡೆದ ಆರೂ ಪಂದ್ಯಗಳಲ್ಲಿ ಚೇಸಿಂಗ್‌ ತಂಡಗಳೇ ಗೆಲುವು ಸಾಧಿಸಿವೆ. ಬೆಂಗಳೂರು ಲೆಗ್‌ನಲ್ಲಿ ನಡೆದ 8 ಪಂದ್ಯಗಳ ಪೈಕಿ ಏಳು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು ಸೋಲು ಕಂಡಿವೆ.

ಎಂಟನೇ ಪಂದ್ಯದಲ್ಲಿ ಯು.ಪಿ. ವಾರಿಯರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮಖಿಯಾಗಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ವಾರಿಯರ್ಸ್‌ 177 ರನ್‌ ಗಳಿಸಿದ್ದರೆ, ನಂತರ ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡವು 144 ರನ್‌ಗೆ ಆಲೌಟ್‌ ಆಯಿತು. ಈ ಪಂದ್ಯದಲ್ಲಿ ಮಾತ್ರ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಗೆದ್ದಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ವಡೋದರ ಲೆಗ್‌ನಲ್ಲಿ ಎರಡು ಪಂದ್ಯಗಳಲ್ಲಿ ಚೇಸಿಂಗ್‌ ಮಾಡಿ ಗೆದ್ದಿದೆ. ತವರಿನಲ್ಲಿ ನಡೆದ ನಾಲ್ಕೂ ಪಂದ್ಯಗಳಲ್ಲಿ ಸ್ಮೃತಿ ಮಂದಾನ ಟಾಸ್ ಸೋತು, ಬ್ಯಾಟಿಂಗ್‌ ಇಳಿಯಬೇಕಾಯಿತು. ತವರಿನ ಪ್ರೇಕ್ಷಕರ ಬೆಂಬಲವಿದ್ದರೂ ಸತತ ನಾಲ್ಕೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದರು. ಹಾಗಾದರೆ ಎರಡೂ ಪಿಚ್‌ಗಳು ನಂತರ ಬ್ಯಾಟಿಂಗ್‌ ಮಾಡಿದ ತಂಡಗಳಿಗೆ ಅನುಕೂಲವಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments