ಮುಂಬೈ: ಐಪಿಎಲ್ 2025 ರಲ್ಲಿ ಆರಂಭದಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈಗ ಪ್ಲೇ ಆಫ್ ಗೂ ಅರ್ಹತೆ ಪಡೆಯದೇ ಕೂಟದಿಂದ ಹೊರಬಿದ್ದಿದೆ. ಇದಕ್ಕೆಲ್ಲಾ ಕೆಎಲ್ ರಾಹುಲ್ ವೃತ್ತ ಎಳೆದಿದ್ದೇ ಕಾರಣ ಎಂದು ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಈ ಹಿಂದೆ ಆರ್ ಸಿಬಿ ವಿರುದ್ಧ ನಡೆದಿದ್ದ ಪಂದ್ಯವನ್ನು ತಾವೇ ಬ್ಯಾಟಿಂಗ್ ಮಾಡಿ ಗೆಲ್ಲಿಸಿದ ಬಳಿಕ ಡೆಲ್ಲಿ ಬ್ಯಾಟಿಗ ಕೆಎಲ್ ರಾಹುಲ್ ಕಾಂತಾರ ಸಿನಿಮಾ ಸ್ಟೈಲ್ ನಲ್ಲಿ ವೃತ್ತ ಎಳೆದು ಇದು ನನ್ನ ಮೈದಾನ ಎಂದು ಅಬ್ಬರಿಸಿದ್ದರು.
ಅವರ ಈ ಸಂಭ್ರಮಾಚರಣೆ ಆರ್ ಸಿಬಿ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಈ ಪಂದ್ಯದ ಬಳಿಕ ಡೆಲ್ಲಿ ಸೋಲಲು ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳು ಈಗ ಅದೇ ವಿಚಾರವನ್ನಿಟ್ಟುಕೊಂಡು ಡೆಲ್ಲಿ ಮತ್ತು ಕೆಎಲ್ ರಾಹುಲ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.
ಡೆಲ್ಲಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ರಾಹುಲ್ ವೃತ್ತ ಎಳೆದರೋ ಅಲ್ಲಿಂದ ಅವನತಿ ಶುರುವಾಯಿತು. ಡೆಲ್ಲಿಯನ್ನು ರಾಹುಲ್ ಅದೇ ವೃತ್ತದೊಳಗೆ ಹಾಕಿ ಮಣ್ಣು ಮುಚ್ಚಿದರು ಎಂದು ಆರ್ ಸಿಬಿ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.