Select Your Language

Notifications

webdunia
webdunia
webdunia
webdunia

ಹಗಲು-ರಾತ್ರಿ ಟೆಸ್ಟ್ ಪಂದ್ಯವು ಭವಿಷ್ಯದ ಬುನಾದಿ: ರಿಚರ್ಡ್ ಹ್ಯಾಡ್ಲಿ

ಹಗಲು-ರಾತ್ರಿ ಟೆಸ್ಟ್ ಪಂದ್ಯವು ಭವಿಷ್ಯದ ಬುನಾದಿ: ರಿಚರ್ಡ್ ಹ್ಯಾಡ್ಲಿ
ಮುಂಬೈ: , ಬುಧವಾರ, 15 ಜೂನ್ 2016 (19:26 IST)
ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಿಗೆ ಹೆಚ್ಚು ಮಹತ್ವ ನೀಡುವುದನ್ನು ಬೆಂಬಲಿಸಿದ ನ್ಯೂಜಿಲೆಂಡ್ ಕ್ರಿಕೆಟ್ ಲೆಜೆಂಡ್ ರಿಚರ್ಡ್ ಹ್ಯಾಡ್ಲಿ  ಇದು ಆಟದ ಭವಿಷ್ಯಕ್ಕೆ ಅನುಕೂಲವಾಗಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವುದಲ್ಲದೇ ಟೆಲಿವಿಷನ್ ವೀಕ್ಷಣೆಗೆ ಕೂಡ ಸೂಕ್ತವಾಗಿದೆ ಎಂದಿದ್ದಾರೆ. 
 
ಹಗಲು ರಾತ್ರಿ ಪಂದ್ಯವು ಕ್ರೀಡೆಯ ಭವಿಷ್ಯವಾಗಿದೆ. ಅಡೆಲೈಡ್ ಓವಲ್‌ನಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆಡಿದಾಗ ಇದೊಂದು ಅದ್ಭುತ ನೋಟವಾಗಿತ್ತು. ನಿಜವಾಗಲೂ ಇದು ನೆರೆದ ಗುಂಪನ್ನು ಆಕರ್ಷಿಸಿದ್ದು, ಟಿವಿ ವೀಕ್ಷಣೆಗೆ ಕೂಡ ಸೂಕ್ತವಾಗಿತ್ತು ಎಂದು ರಿಚರ್ಡ್ ಇಲ್ಲಿನ ಬಾಂಬೆ ಹೌಸ್‌ನಲ್ಲಿ ವರದಿಗಾರರಿಗೆ ತಿಳಿಸಿದರು. 
 
 ಪ್ರಪ್ರಥಮ ಹಗಲು ರಾತ್ರಿ ಪಂದ್ಯವನ್ನು ಟ್ರಾನ್ಸ್ -ಟಾಸ್ಮಾನಿಯನ್ ಎದುರಾಳಿಗಳ ನಡುವೆ ಕಳೆದ ವರ್ಷ ಓವರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಆಸ್ಟ್ರೇಲಿಯಾ ಕಿವೀಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತ್ತು.  ಆಟದಲ್ಲಿ  ಸಾಂಪ್ರದಾಯಿಕ ಕೆಂಪು ಚೆರಿ ಬದಲಿಗೆ  ಬಳಸಿದ ನಸುಗೆಂಪು ಚೆಂಡು ನಿರೀಕ್ಷೆಗಿಂತ ಉತ್ತಮವಾಗಿ ಬಳಕೆಯಾಯಿತು.
 
 ಕೆಲವು ಪ್ರದೇಶಗಳಲ್ಲಿ ಇಬ್ಬನಿಯ ಅಂಶಗಳಿಂದ ಚೆಂಡಿನ ಮೇಲೆ ಪರಿಣಾಮ ಬೀರುವುದು ಏಕಮಾತ್ರ ಸಮಸ್ಯೆಯಾಗಿದೆ. ಅದು ಫೀಲ್ಡಿಂಗ್ ತಂಡಕ್ಕೆ ಅನುನುಕೂಲವಾಗುವುದರಿಂದ ಅದನ್ನು ಸರಿಪಡಿಸಲು ಏನಾದರೂ ಮಾಡಬೇಕು ಎಂದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋಲಾಸ್‌ಗೆ ಜಯಗಳಿಸಿದ ಭಾರತ : ಜಿಂಬಾಬ್ವೆ ಕ್ಲೀನ್ ಸ್ವೀಪ್