ಸನ್ ರೈಸರ್ಸ್ ಹೈದರಾಬಾದ್ ಕಡೆಗಣಿಸಿದ ವಾರ್ನರ್ ಈಗ ಆಸ್ಟ್ರೇಲಿಯಾ ಪಾಲಿನ ಹೀರೋ

Webdunia
ಮಂಗಳವಾರ, 16 ನವೆಂಬರ್ 2021 (09:05 IST)
ಮುಂಬೈ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಗೆಲುವಿನ ರೂವಾರಿಯಾಗಿ ಹೀರೋ ಎನಿಸಿಕೊಂಡಿದ್ದಾರೆ.

ಕ್ಲಾಸ್ ಪರ್ಮೆನೆಂಟ್ ಎಂಬ ಮಾತನ್ನು ವಾರ್ನರ್ ಸಾಧಿಸಿ ತೋರಿಸಿದ್ದಾರೆ. ಐಪಿಎಲ್ 14 ರ ಆರಂಭಿಕ ಹಂತದಲ್ಲಿ ವಾರ್ನರ್ ಕಳಪೆ ಫಾರ್ಮ್ ನಲ್ಲಿದ್ದರು ಎಂಬ ಕಾರಣಕ್ಕೆ ಅವರಿಂದ ನಾಯಕತ್ವ ಕಿತ್ತುಕೊಳ್ಳಲಾಯಿತು. ಬಳಿಕ ಎರಡನೇ ಹಂತದಲ್ಲಿ ಅವರನ್ನು ಆಡುವ ಬಳಗದಿಂದಲೇ ಹೊರಹಾಕಿ ಅವಮಾನ ಮಾಡಲಾಯಿತು.

ಆದರೆ ಈ ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋಲುತ್ತಿದ್ದ ಆಸೀಸ್ ಗೆ ಬಲ ತುಂಬಿದ್ದು ವಾರ್ನರ್ ಸ್ಪೋಟಕ ಬ್ಯಾಟಿಂಗ್. ಫೈನಲ್ ನಲ್ಲೂ ವಾರ್ನರ್ ನೀಡಿದ ಉತ್ತಮ ಆರಂಭದಿಂದಾಗಿ ಆಸ್ಟ್ರೇಲಿಯಾಗೆ ಸುಲಭ ಜಯ ದೊರಕಿತು. ಪಂದ್ಯದ ನಂತರ ಆಸೀಸ್ ನಾಯಕ ಫಿಂಚ್ ಕೂಡಾ ವಾರ್ನರ್ ಬಗ್ಗೆ ಹೊಗಳಿದ್ದಾರೆ. ಈ ಮೂಲಕ ಹೈದರಾಬಾದ್ ಕಡೆಗಣಿಸಿದ ವಾರ್ನರ್ ಆಸೀಸ್ ಪಾಲಿನ ಹೀರೋ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

IND vs AUS T20: ಟೀಂ ಇಂಡಿಯಾಕ್ಕೆ ಇಂದಿನಿಂದ ಆಸ್ಟ್ರೇಲಿಯಾ ಟಿ20 ಪರೀಕ್ಷೆ

ಮುಂದಿನ ಸುದ್ದಿ
Show comments