Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ದಾದಾ..!!

ನಾಗಶ್ರೀ ಭಟ್
ಗುರುವಾರ, 25 ಜನವರಿ 2018 (17:49 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಸೋತ ನಂತರ ಹಲವರು ಕೊಹ್ಲಿಯ ನಾಯಕತ್ವದ ಕುರಿತು ಬಹಳಷ್ಟು ಟೀಕೆಗಳು ಬರುತ್ತಿದ್ದು, ಈ ಕುರಿತು ಭಾರತದ ಕ್ರಿಕೆಟ್ ದಾದಾ ಗಂಗೂಲಿ ತನ್ನ ಕಾಲಂನಲ್ಲಿ ಕೊಹ್ಲಿಗೆ ಬೆಂಬಲ ಸೂಚಿಸಿ ಬರೆಯುವ ಮೂಲಕ ಟೀಕಾಕಾರರಿಗೆ ಹುಬ್ಬೇರಿಸುವಂತೆ ಮಾಡಿದ್ದಾರೆ.
ಕೊಹ್ಲಿ ಒಬ್ಬ ಸಮರ್ಥ ನಾಯಕನಾಗಿದ್ದು, ತಂಡವನ್ನು ಮುನ್ನಡೆಸುವ ಎಲ್ಲಾ ಚಾಕಚಕ್ಯತೆಗಳು ಅವರಲ್ಲಿವೆ. ಏಷ್ಯಾದಲ್ಲಿ ನಡೆದ ಹಲವು ಸರಣಿಗಳನ್ನು ಸತತವಾಗಿ ಗೆದ್ದಾಗ ಹಾಡಿ ಹೊಗಳಿದ ಜನರೇ ಇವತ್ತು ಸೋತಾಗ ತೆಗಳುತ್ತಿದ್ದಾರೆ ಅಷ್ಟೇ ಅಲ್ಲ 'ಕಳೆದ ಒಂದು ವರ್ಷದಿಂದ ಏಷ್ಯಾದಲ್ಲಿ ಆಡಿದ ಭಾರತ ತಂಡಕ್ಕೆ ಏಕಾಏಕಿ ದಕ್ಷಿಣ ಆಫ್ರಿಕಾದಲ್ಲಿ ಆಡುವುದು ಯಾವಾಗಲೂ ಸಹ ಕಠಿಣವಾಗಿರುತ್ತದೆ ಮತ್ತು ಜನರು ಕೊಹ್ಲಿಗೆ ಸ್ವಲ್ಪ ಸಮಯವನ್ನು ನೀಡಬೇಕು ಎಂಬುದಾಗಿ ಬರೆದುಕೊಂಡಿದ್ದಾರೆ.
 
ಅಷ್ಟೇ ಅಲ್ಲ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲಿದೆ. ಅಲ್ಲದೇ ಕೊಹ್ಲಿಯವರ ತಂಡವು ಆಡುವುದು ಇನ್ನೂ ಬಹಳಷ್ಟಿದೆ ಎಂಬುದನ್ನು ಸಹ ಅವರು ಹೇಳಿದ್ದಾರೆ.
 
ಎರಡನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ನೀಡಿದ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಕೊಹ್ಲಿಯ ಬಿರುಸಾದ ಹೇಳಿಕೆಯ ಕುರಿತು ಈ ರೀತಿಯಾಗಿ ಪ್ರತಿಕ್ರಿಯಿಸಿರುವ ದಾದಾ 'ವಿರಾಟ್ ಕೊಹ್ಲಿಯ ನಾಯಕತ್ವ ಗುಣಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಇದು ಅವರ ಮೊದಲ ಸಾಗರದಾಚೆಗಿನ ಪ್ರವಾಸವಾಗಿರುವ ಕಾರಣ ಜನರು ಸ್ವಲ್ಪ ತಾಳ್ಮೆಯಿಂದಿ ವರ್ತಿಸಬೇಕು. ನಿಜವಾಗಿ ಯಾರೂ ಸಹ ಹುಟ್ಟಿನಿಂದಲೇ ನಾಯಕನಾಗಿರುವುದಿಲ್ಲ ಮತ್ತು ನಾಯಕನಾಗಿ ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಅವರಿಗೆ ಅವಕಾಶವನ್ನು ನೀಡಬೇಕಾಗುತ್ತದೆ. ಕೊಹ್ಲಿ ಉತ್ತಮ ನಾಯಕನಾಗಿ ಬೆಳೆಯುತ್ತಾರೆ ಎನ್ನುವ ವಿಶ್ವಾಸ ನನಗಿದೆ' ಎಂದು ಹೇಳಿದ್ದಾರೆ.
 
311 ಏಕದಿನ ಪಂದ್ಯಗಳು ಮತ್ತು 113 ಟೆಸ್ಟ್ ಪಂದ್ಯಗಳನ್ನು ಆಡಿ ಹಲವು ಪಂದ್ಯಗಳಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿ ಕ್ರಿಕೆಟ್ ಜಗತ್ತು ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದ ಹಳೆಯ ಕಫ್ತಾನ ಗಂಗೂಲಿ ಹಿಂದೆ ಈ ಎಲ್ಲಾ ಸನ್ನಿವೇಶಗಳನ್ನು ಎದುರಿಸಿರುವ ಕಾರಣ ಅವರಿಗೆ ಇಂತಹ ಸಂದರ್ಭಗಳು ಹೊಸತೇನಲ್ಲ. ಕೊಹ್ಲಿ ಬೆಂಬಲಕ್ಕೆ ದೋನಿ ಸಾತ್ ನೀಡಿದ್ದು ಇದೀಗ ದಾದಾ ಸಹ ಸೇರ್ಪಡೆಗೊಂಡಿದ್ದಾರೆ ಎಂದೇ ಹೇಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments