Publish Date: Wed, 07 Jul 2021 (16:40 IST)
Updated Date: Wed, 07 Jul 2021 (16:43 IST)
ಸಿಲ್ಚಾರ್(ಅಸ್ಸೋಂ):ರಣಜಿ ಕ್ರಿಕೆಟ್ ಆಡಿದ್ರೆ ಸಾಕು ಕೆಲ ಕ್ರಿಕೆಟಿಗರ ಲೈಫ್ ಸ್ಟೈಲ್ ಸಂಪೂರ್ಣವಾಗಿ ಚೇಂಜ್ ಆಗಿ ಬಿಡುತ್ತದೆ. ಅವರು ಐಷಾರಾಮಿಯಾಗಿ ಬದುಕಲು ಶುರು ಮಾಡ್ತಾರೆ.
ಇಲ್ಲೊಬ್ಬ ಕ್ರಿಕೆಟರ್‌ನದ್ದು ದಯನೀಯ ಪರಿಸ್ಥಿತಿ. ಇವರು ಬದುಕಿನ ಬಂಡಿ ಸಾಗಿಸಲು ಬೇರೆ ಉದ್ಯೋಗ ಸಿಗದೆ, ರಸ್ತೆ ಪಕ್ಕದಲ್ಲಿ ದಾಲ್ ಪುರಿ ಮಾರಾಟವನ್ನೇ ನೆಚ್ಚಿಕೊಂಡಿದ್ದಾರೆ. ಇದು ಲೆಫ್ಟ್ ಆರ್ಮ್ ಸ್ಪಿನ್ನರ್ ಪ್ರಕಾಶ್ ಭಗತ್ ಬದುಕಿನ ಕಥೆ.
ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ 2003ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಸಜ್ಜುಗೊಳ್ಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕ್ರಿಕೆಟ್ ಅಕಾಡೆಮಿಯಲ್ಲಿ ಲೆಫ್ಟ್ ಆರ್ಮ್ ಸ್ಪಿನ್ನರ್ ಪ್ರಕಾಶ್ ಭಗತ್ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.