ಕ್ರಿಕೆಟ್ ಕಡುವೈರಿಗಳಾದ ಭಾರತ ಮತ್ತು ಪಾಕಿಸ್ತಾನಕ್ಕೆ ಐಸಿಸಿ ಟೆಸ್ಟ್ ಶ್ರೇಯಾಂಕಗಳಿಗೆ ಸಂಬಂಧಿಸಿ ಶುಭ ಸುದ್ದಿ ಬಂದಿದ್ದು, ಓವಲ್‌ನಲ್ಲಿ ಪಾಕ್ 10 ವಿಕೆಟ್ ಜಯದ ಬಳಿಕ ಮೂರನೇ ಸ್ಥಾನಕ್ಕೆ ಜಿಗಿದಿದೆ. ಭಾರತ ಆಸ್ಟ್ರೇಲಿಯಾದ ಹಿಂದೆ 2ನೇ ಸ್ಥಾನದಲ್ಲಿದೆ.
ಮುಂದಿನ ಕ್ರಮಾಂಕ ಪಟ್ಟಿ ಬಂದಾಗ ಭಾರತಕ್ಕೆ ನಂಬರ್ ಒನ್ ಆಗುವ ಸದವಕಾಶ ಸಿಕ್ಕಿದೆ. ಟ್ರಿನಿಡಾಡ್‌ನಲ್ಲಿ ಆಗಸ್ಟ್ 18ರಿಂದ ನಡೆಯುವ ನಾಲ್ಕನೇ ಟೆಸ್ಟ್‌ನಲ್ಲಿ ಗೆಲುವು ಗಳಿಸಿದರೆ ವಿರಾಟ್ ಕೊಹ್ಲಿ ಬಳಕ ನಂಬರ್ ಒಂದು ಸ್ಥಾನಕ್ಕೆ ಜಿಗಿಯುತ್ತದೆ.
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಕೊಲಂಬೊ ಟೆಸ್ಟ್ ಮತ್ತು ವೆಸ್ಟ್ ಇಂಡೀಸ್ ಹಾಗೂ ಭಾರತದ ನಡುವೆ ನಾಲ್ಕನೇ ಟೆಸ್ಟ್ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನ ನಂಬರ್ ಒನ್ ಸ್ಥಾನಕ್ಕೆ ಏರಬಹುದು.