ತಾವು ಯಾವುದೇ ಮಾದರಿ ಆಟವಾಡಲಿ, ತಮಗೆ ಅಂತರ್ಗತವಾಗಿ ಬಂದ ಸಹಜ ಆಟವನ್ನು ಬದಲಿಸುವುದಿಲ್ಲ ಎಂದು ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಸ್ಕೋರಿಗೆ ಔಟಾಗಿದ್ದ ರೋಹಿತ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನದ ಕೊನೆಯಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿ ರನ್ ರೇಟ್ ಏರಿಸಿದ್ದರು. ಆದರೆ ಐದನೇ ದಿನ ಬೆಳಿಗ್ಗೆ 59 ಎಸೆತಗಳಲ್ಲಿ 41 ರನ್ ಗಳಿಸಿದ್ದಾಗ ದುರದೃಷ್ಟಕರ ತೀರ್ಪಿಗೆ ಔಟಾಗಿದ್ದರು.
ನನ್ನ ಸಹಜ ಆಟವು ದಾಳಿ ಮಾಡುವುದಾಗಿದ್ದು, ಬೌಲರುಗಳ ಮೇಲೆ ಒತ್ತಡ ಹಾಕುವುದಾಗಿದೆ. ನಾನು ಮೊದಲ ಎಸೆತ ಅಥವಾ ಕೊನೆಯ ಎಸೆತ ಎದುರಿಸಲಿ. ಪರಿಸ್ಥಿತಿಗಳು ಭಿನ್ನವಾಗಿರುತ್ತದೆಂದು ಗೊತ್ತು. ಆದರೆ ನನ್ನ ಸಹಜ ಆಟ ಬದಲಿಸುವುದಿಲ್ಲ. ಟೆಸ್ಟ್ ಕ್ರಿಕೆಟ್ ಅನ್ನು ಏಕ ದಿನ ಪಂದ್ಯದ ರೀತಿ ಆಡಲಾಗುವುದಿಲ್ಲವೆಂದು ನನಗೆ ಗೊತ್ತಿದೆ. ಆದರೆ ಕ್ರಿಕೆಟರುಗಳು ಇದೇ ರೀತಿಯಲ್ಲಿ ಆಡಿದ ನಿದರ್ಶನಗಳಿವೆ ಎಂದು ರೋಹಿತ್ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ