Publish Date: Mon, 02 Oct 2023 (09:00 IST)
Updated Date: Mon, 02 Oct 2023 (09:09 IST)
ಬೆಂಗಳೂರು: ಏಕದಿನ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪಂದ್ಯಗಳು ನಡೆಯಲಿರುವ ಎಲ್ಲಾ ಭಾರತೀಯ ಮೈದಾನಗಳೂ ಈಗ ನವವಧುವಿನಂತೆ ಕಂಗೊಳಿಸುತ್ತಿವೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ಪಂದ್ಯಗಳು ಆಯೋಜನೆಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಹಾಗೂ ಕೆಎಸ್ ಸಿಎ ಸಹಯೋಗದಲ್ಲಿ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ನವೀಕರಣ ಕೆಲಸ ಮಾಡಲಾಗಿದೆ.
ಚಿನ್ನಸ್ವಾಮಿ ಮೈದಾನದ ಔಟ್ ಫೀಲ್ಡ್ ನ್ನು ಹಸಿರುಗೊಳಿಸಲಾಗಿದ್ದು, ಇದೀಗ ಮೈದಾನ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಜೊತೆಗೆ ರೂಫ್, ಸೀಟಿಂಗ್ ಅರೇಂಜ್ ಮೆಂಟ್, ಟಿಕೆಟ್ ಸೆಂಟರ್ ನಲ್ಲಿಯೂ ನವೀಕರಣ ಕೆಲಸ ಮಾಡಲಾಗಿದೆ. ಅಕ್ಟೋಬರ್ 20 ರಂದು ಇಲ್ಲಿ ಮೊದಲ ಪಂದ್ಯ ನಡೆಯಲಿದ್ದು, ನವಂಬರ್ 12 ರಂದು ಭಾರತ-ನೆದರ್ಲ್ಯಾಂಡ್ಸ್ ನಡುವೆ ಪಂದ್ಯ ನಡೆಯಲಿದೆ.